* ಪೋಖ್ರಾನ್–1 ಹಾಗೂ ಪೋಖ್ರಾನ್–2 ಪರಮಾಣು ಪರೀಕ್ಷೆಯಲ್ಲಿ ಪ್ರಮುಖಪಾತ್ರ ವಹಿಸಿದ್ದ ಹಿರಿಯ ಪರಮಾಣು ವಿಜ್ಞಾನಿ ಹಾಗೂ ಕ್ರಿಸ್ಟಲೋಗ್ರಫರ್ ಡಾ. ರಾಜಗೋಪಾಲ ಚಿದಂಬರಂ ಅವರು (89) ಶನಿವಾರ(ಜನವರಿ 04) ನಿಧನರಾದರು. ಕಳೆದ ಕೆಲ ದಿನಗಳಿಂದ ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.* ಅಂತರರಾಷ್ಟ್ರೀಯ ಪರಮಾಣು ಇಂಧನ ಏಜೆನ್ಸಿ (IAEA) ಆಡಳಿತ ಮಂಡಳಿಗೆ 1994–95 ಅವಧಿಯ ಅಧ್ಯಕ್ಷರಾಗಿದ್ದರು. ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರಾಗಿದ್ದರು. * ಭಾರತದ ಪರಮಾಣು ಶಸ್ತ್ರಾಸ್ತ್ರ ಕಾರ್ಯಕ್ರಮದಲ್ಲಿ ಡಾ. ಚಿದಂಬರಂ ಅವರು ಪ್ರಮುಖ ಪಾತ್ರ ವಹಿಸಿದ್ದರು.* 1975ರ ಪೋಖ್ರಾನ್–1 ಪರೀಕ್ಷೆ ಹಾಗೂ 1998ರಲ್ಲಿ ನಡೆದ ಪೋಖ್ರಾನ್ –2 ಪರೀಕ್ಷೆಯ ಸಂಯೋಜಕರಾಗಿದ್ದರು. ಪದ್ಮಶ್ರೀ (1975) ಹಾಗೂ ಪದ್ಮ ವಿಭೂಷಣ (1999) ಪ್ರಶಸ್ತಿಗಳು ಡಾ. ಚಿದರಂಬರಂ ಅವರಿಗೆ ಸಂದಿವೆ.