* ಹಿಮಾಚಲ ಪ್ರದೇಶ ರಾಜ್ಯವು ಶೇ.99.3 ಸಾಕ್ಷರತೆಯನ್ನು ಸಾಧಿಸಿ ಸಂಪೂರ್ಣ ಸಾಕ್ಷರತಾ ರಾಜ್ಯವಾಗಿದೆ ಎಂದು ಸಿಎಂ ಸುಖವಿಂದರ್ ಸಿಂಗ್ ಸುಖ್ಖು ಘೋಷಿಸಿದ್ದಾರೆ. ಇದು ದೇಶದ ಶೇ.95 ಸಾಕ್ಷರತಾ ಬೆಂಚ್ಮಾರ್ಕ್ಗಿಂತ ಹೆಚ್ಚಾಗಿದೆ.* ಮಿಜೋರಾಂ 2025ರ ಮೇ 20ರಂದು ಸಂಪೂರ್ಣ ಸಾಕ್ಷರತೆಯನ್ನು ಘೋಷಿಸಿಕೊಂಡ ದೇಶದ ಮೊದಲ ರಾಜ್ಯ. ಅದರ ಸಾಕ್ಷರತೆ ಶೇ.98.2 ಆಗಿದೆ. 2011ರಲ್ಲಿ ಶೇ.91.33 ಇತ್ತು.* ಗೋವಾ ಸಂಪೂರ್ಣ ಶೇ.100 ಸಾಕ್ಷರತೆ ಸಾಧಿಸಿ ಎರಡನೇ ರಾಜ್ಯವಾಗಿದೆ. ಮುಂಚೆ ಗೋವಾದಲ್ಲಿ ಶೇ.94 ಸಾಕ್ಷರತೆ ಇತ್ತು.* ತ್ರಿಪುರ ಮೂರನೇ ಸಂಪೂರ್ಣ ಸಾಕ್ಷರತಾ ರಾಜ್ಯ. ಇಂದಿಗೆ ಶೇ.95.6 ಸಾಧಿಸಿದ್ದು, 1961ರಲ್ಲಿ ಕೇವಲ ಶೇ.20.2 ಇತ್ತು.* ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಡಾಖ್ ಮೊದಲ ಸಂಪೂರ್ಣ ಸಾಕ್ಷರ ಪ್ರದೇಶವಾಗಿ ಶೇ.97 ಸಾಧಿಸಿದೆ.* ಭಾರತದ ಒಟ್ಟು ಸಾಕ್ಷರತೆ ಶೇ.80.9 (2023-24), ಕೇರಳದ ಸಾಕ್ಷರತೆ ಶೇ.96.2 ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರದಾನ್ ತಿಳಿಸಿದ್ದಾರೆ.