* ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ಅನುಕೂಲವಾಗುವಂತೆ, ಪುಣೆ-ಬೆಳಗಾವಿ ಮತ್ತು ಪುಣೆ-ಕಲಬುರಗಿ-ಹೈದರಾಬಾದ್ ಮಾರ್ಗಗಳಲ್ಲಿ ಹೊಸ ವಂದೇ ಭಾರತ್ ರೈಲು ಸೇವೆ ಶೀಘ್ರದಲ್ಲೇ ಆರಂಭವಾಗಲಿದೆ.* ಈ ಹೊಸ ರೈಲುಗಳ ಮೂಲಕ ಮಹಾರಾಷ್ಟ್ರದ ಪ್ರಮುಖ ನಗರಗಳು ಮತ್ತು ಹೈದರಾಬಾದ್ಗೆ ಸಂಪರ್ಕ ಸುಲಭವಾಗಲಿದೆ.* ಭಾರತೀಯ ರೈಲ್ವೆ ಪುಣೆಯಿಂದ ಶೇಗಾಂವ್, ವಡೋದರಾ, ಬೆಳಗಾವಿ ಹಾಗೂ ಸಿಕಂದರಾಬಾದ್ಗೆ ನಾಲ್ಕು ವಂದೇ ಭಾರತ್ ಎಕ್ಸ್ಪ್ರೆಸ್ಗಳನ್ನು ಚಲಾಯಿಸಲು ನಿರ್ಧರಿಸಿದೆ.* ಪುಣೆ-ಸಿಕಂದರಾಬಾದ್ ವಂದೇ ಭಾರತ್ ರೈಲು ದೌಂಡ್, ಸೊಲ್ಲಾಪುರ ಮತ್ತು ಕಲಬುರಗಿಗೆ ನಿಲುಗಡೆ ನೀಡಲಿದೆ. ಇದರ ಪರಿಣಾಮವಾಗಿ 2-3 ಗಂಟೆಗಳಷ್ಟು ಪ್ರಯಾಣ ಸಮಯ ಕಡಿಮೆಯಾಗಲಿದೆ.* ಈ ಮಾರ್ಗದಲ್ಲಿ ಈಗಾಗಲೇ ಹುಬ್ಬಳ್ಳಿ-ಬೆಳಗಾವಿ-ಪುಣೆ ನಡುವಿನ ವಂದೇ ಭಾರತ್ ಸೇವೆ ವಾರದಲ್ಲಿ ಮೂರು ಬಾರಿ ನಡೆಯುತ್ತಿದೆ. ಬೆಳಗಾವಿ ನಿವಾಸಿಗಳು ಈ ಮಾರ್ಗದಲ್ಲಿ ನಿತ್ಯ ಸೇವೆ ನೀಡಬೇಕೆಂದು ಆಗ್ರಹಿಸುತ್ತಿದ್ದರು.