* ಹಾಸ್ಯ ನಟ ಬ್ಯಾಂಕ್ ಜನಾರ್ಧನ್ (77) ಅವರು ಏಪ್ರಿಲ್ 14ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.* 1948ರಲ್ಲಿ ಬ್ಯಾಂಕ್ ಜನಾರ್ಧನ್ ಅವರು ಬೆಂಗಳೂರಿನಲ್ಲಿ ಜನಿಸಿದರು. ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು 1985ರ 'ಪಿತಾಮಹ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ‘ಶ್’, ‘ತರ್ಲೆ ನನ್ ಮಗ’, ‘ಜೀ ಬೂಂಬಾ’, ‘ಗಣೇಶ ಸುಬ್ರಮಣ್ಯ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಖ್ಯಾತ ಹಾಸ್ಯ ನಟರಾಗಿ ಗುರುತಿಸಿಕೊಂಡಿದ್ದರು.* ಚಿತ್ರದುರ್ಗದ ಹೊಳಲ್ಕೆರೆ ಬಳಿಯ ಬ್ಯಾಂಕ್ನಲ್ಲಿ ಕೆಲಸ ಮಾಡಿದ್ದ ಕಾರಣ ಅವರಿಗೆ ‘ಬ್ಯಾಂಕ್’ ಜನಾರ್ಧನ್ ಎಂದು ಹೆಸರಾಯಿತು.* ನಾಟಕಗಳ ಮೂಲಕ ಆರಂಭಿಸಿದ ಅವರ ಕಲಾಜೀವನ, ಧೀರೇಂದ್ರ ಗೋಪಾಲ್ ಪ್ರೇರಣೆಯಿಂದ ಚಿತ್ರರಂಗದತ್ತ ಮುಂದಾಗಿ ಯಶಸ್ವಿಯಾಗಿ ನೆಮ್ಮದಿಯ ಹಾಸ್ಯ ನಟನಾಗಿ ಹೊರಹೊಮ್ಮಿದರು.* ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟರಾಗಿ ಗುರುತಿಸಿಕೊಂಡ ಇವರು ದೊಡ್ಡಣ್ಣ, ಟೆನ್ನಿಸ್ ಕೃಷ್ಣ ಸಾಧುಕೋಕಿಲ, ಬುಲೆಟ್ ಪ್ರಕಾಶ್ ಸೇರಿದಂತೆ ಹಲವರೊಂದಿಗೆ ನಟಿಸಿ ತಮ್ಮ ಛಾಪು ಮೂಡಿಸಿದ್ದರು. * ಅವರ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ಭಾರಿ ನಷ್ಟವಾಗಿದೆ.