* ಭಾರತದ ಜೀವನ್ ನೆಡುಂಚೆಳಿಯನ್ ಮತ್ತು ಅವರ ಜೊತೆಗಾರ ವಿಜಯ್ ಸುಂದರ್ ಪ್ರಶಾಂತ್ ಅವರು ಜರ್ಮನಿಯ ಕಾನ್‌ಸ್ಟಾಂಟಿನ್ ಫ್ರಾಂಟ್ಜೆನ್ ಮತ್ತು ಹೆಂಡ್ರಿಕ್ ಜೆಬೆನ್ಸ್ ಅವರನ್ನು ಸೋಲಿಸಿ ಜೋಡಿಯಾಗಿ ತಮ್ಮ ಮೊದಲ ಓಪನ್ ಪುರುಷರ ಟೆನಿಸ್‌ ಟೂರ್ನಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.* ಒಂದು ಗಂಟೆ 49 ನಿಮಿಷಗಳವರೆಗೆ ನಡೆದ ಫೈನಲ್‌ನಲ್ಲಿ ಶ್ರೇಯಾಂಕರಹಿತ ಜೀವನ್- ವಿಜಯ್ ಜೋಡಿ ಹಿನ್ನಡೆಯಿಂದ ಚೇತರಿಸಿಕೊಂಡು ಜರ್ಮನಿಯ ಕಾನ್‌ಸ್ಟಂಟೈನ್ ಫ್ರಾಂಟೈನ್- ಹೆಂಡ್ರಿಕ್ ಜೆಬೆನ್ಸ್ ಜೋಡಿಯನ್ನು 4-6, 7-6 (5), 10-7 ರಿಂದ ಸೋಲಿಸಿದರು. ಜರ್ಮನಿಯ ಜೋಡಿ ಸಹ ಶ್ರೇಯಾಂಕ ಪಡೆದಿರಲಿಲ್ಲ.* 35 ವರ್ಷ ವಯಸ್ಸಿನ ಜೀವನ್ ಅವರಿಗೆ ಇದು ಎರಡನೇ ಎಟಿಪಿ ಟೂರ್ ಪ್ರಶಸ್ತಿ. ಅವರು ಈ ಹಿಂದೆ, 2017ರಲ್ಲಿ ರೋಹನ್ ಬೋಪಣ್ಣ ಜೊತೆಗೂಡಿ ಚೆನ್ನೈ ಓಪನ್‌ನಲ್ಲಿ ವಿಜೇತರಾಗಿದ್ದರು. ಇನ್ನೊಂದೆಡೆ ವಿಜಯ್‌ಗೆ ಒಲಿದ ಮೊದಲ ಎಟಿಪಿ ಪ್ರಶಸ್ತಿಯಿದಾಗಿದೆ. * ಮೊದಲ ಸೆಟ್‌ ಅನ್ನು 4-6ರಲ್ಲಿ ಸೋತ ನಂತರ ಭಾರತದ ಜೋಡಿ ಪ್ರತಿರೋಧ ಪ್ರದರ್ಶಿಸಿತು. ಎರಡನೇ ಸೆಟ್‌ ಅನ್ನು ಟೈಬ್ರೇಕರ್‌ನಲ್ಲಿ ಪಡೆದು, ಪಂದ್ಯವನ್ನು ನಿರ್ಣಾಯಕ ಸೆಟ್‌ಗೆ ಬೆಳೆಸಿದರು. ಇಲ್ಲಿ ಒತ್ತಡದ ನಡುವೆಯೂ ಸಂಯಮ ವಹಿಸಿ ಸೆಟ್ ಹಾಗೂ ಪಂದ್ಯ ತನ್ನದಾಗಿಸಿಕೊಂಡಿತು.