* ಭಾರತ ಹಾಕಿ ತಂಡದ ಮುಂಚೂಣಿ ಆಟಗಾರ್ತಿ ದೀಪಿಕಾ ಅವರು ‘ಪಾಲಿಗ್ರಾಸ್ ಮ್ಯಾಜಿಕ್ ಸ್ಕಿಲ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭುವನೇಶ್ವರದಲ್ಲಿ 2024–25ನೇ ಸಾಲಿನ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ದೀಪಿಕಾ ಬಲೆಸಿದ ಚಮತ್ಕಾರದ ಗೋಲಿಗೆ ಈ ಗೌರವ ಲಭಿಸಿದೆ.* ಭಾರತ 0–2 ಹಿನ್ನಡೆಯಲ್ಲಿದ್ದಾಗ, ದೀಪಿಕಾ 35ನೇ ನಿಮಿಷ ಎಡಗಡೆಯಿಂದ ಚಿತ್ತಾಕರ್ಷಕ ಡ್ರಿಬ್ಲಿಂಗ್ ಮೂಲಕ ಡಿಫೆಂಡರ್ಗಳನ್ನು ಮೀರಿಸಿ ಗೋಲು ಗಳಿಸಿದರು. ಈ ಗೋಲಿನಿಂದ ಭಾರತ ಮತ್ತೆ ಸ್ಪರ್ಧೆಗೆ ಹಿಂದಿರುಗಿ 2–2 ಸಮನಾಗಿ ಶೂಟೌಟ್ವರೆಗೆ ಹೋರಾಡಿತು.* 21 ವರ್ಷದ ದೀಪಿಕಾ, ಈ ಪ್ರಶಸ್ತಿ ತಮ್ಮೊಬ್ಬರದ್ದಲ್ಲದೆ ಭಾರತದ ಹಾಕಿಗೆ ಸೇರಿದದ್ದು ಎಂದಿದ್ದಾರೆ. ತಂಡ, ಕೋಚ್ಗಳು, ಕುಟುಂಬ ಮತ್ತು ಸ್ನೇಹಿತರಿಗೆ ಧನ್ಯವಾದ ತಿಳಿಸಿದ್ದಾರೆ.* ಈ ಪ್ರಶಸ್ತಿಗೆ ಸ್ಪೇನ್ನ ಪೆಟ್ರೀಷಿಯಾ ಆಳ್ವಾರೆಝ್ ಮತ್ತು ಆಸ್ಟ್ರೇಲಿಯಾ ತಂಡದ ಗೋಲುಗಳು ಕೂಡ ಸ್ಪರ್ಧೆಯಲ್ಲಿದ್ದವು. ಪುರುಷರ ವಿಭಾಗದಲ್ಲಿ ಈ ಪ್ರಶಸ್ತಿಗೆ ಬೆಲ್ಜಿಯಂನ ವಿಕ್ಟರ್ ವೆಗ್ನೆಝ್ ಆಯ್ಕೆಯಾಗಿದ್ದಾರೆ.