* ಗುವಾಹಟಿ ಐಐಟಿಯಲ್ಲಿ ನಡೆದ 10 ನೇ ಭಾರತ ಅಂತರಾಷ್ಟ್ರೀಯ ವಿಜ್ಞಾನ ಉತ್ಸವ (IISF) ನವೆಂಬರ್ 30 ರಿಂದ ಪ್ರಾರಂಭವಾಗಿ ಡಿಸೆಂಬರ್ 4, 2024 ರಂದು ಮುಕ್ತಾಯವಾಯಿತು.* ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಇಂಟರ್ ಡಿಸಿಪ್ಲಿನರಿ ಸೈನ್ಸ್ ಆ್ಯಂಡ್ ಟೆಕ್ನಾಲಜಿ (ಸಿಎಸ್ಐಆರ್-ಎನ್ ಐಐಎಸ್ಟಿ) ಕಾರ್ಯಕ್ರಮವನ್ನು ನಿರ್ವಹಿಸಿದವು.* 'ಭಾರತವನ್ನು ವಿಜ್ಞಾನ-ತಂತ್ರಜ್ಞಾನ ಆಧರಿತ ಉತ್ಪಾದನಾ ಕೇಂದ್ರವನ್ನಾಗಿ ರೂಪಾಂತರಿ '(Transforming India into an S&T-driven Global Manufacturing Hub) ಎಂಬ ಧೈಯದೊಂದಿಗೆ ಆಯೋಜಿಸಲಾಗಿತ್ತು.* 4 ದಿನಗಳ ಮೆಗಾ ವಿಜ್ಞಾನ ಉತ್ಸವವು 24 ವಿಭಿನ್ನ ಕಾರ್ಯಕ್ರಮಗಳನ್ನು ಒಳಗೊಂಡಿತ್ತು, ಇದರಲ್ಲಿ 7000 ಪ್ರತಿನಿಧಿಗಳು ಮತ್ತು 45000 ಜನರು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.* ಐಐಟಿ ಗುವಾಹಟಿಯಲ್ಲಿ ಚಂದ್ರನ ದೈತ್ಯ 10-ಮೀಟರ್ ಎತ್ತರದ 'ನೈಜ ಮೇಲ್ಮೈ ಪ್ರತಿರೂಪವಾಗಿದ್ದು, ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತದ ಪ್ರಗತಿಯನ್ನು ಪ್ರದರ್ಶಿಸುತ್ತದೆ.* ಗಡಿಗಳನ್ನು ಮೀರಿದ ವಿಜ್ಞಾನ - S&T ಯಲ್ಲಿನ ಜಾಗತಿಕ ಸವಾಲುಗಳನ್ನು ಎದುರಿಸಲು ವಿಜ್ಞಾನಿಗಳು, ಸಂಶೋಧಕರು ಮತ್ತು ಸಂಸ್ಥೆಗಳ ನಡುವೆ ಅಂತರರಾಷ್ಟ್ರೀಯ ಸಹಯೋಗ, ಪಾಲುದಾರಿಕೆ ಮತ್ತು ಸಂವಾದಗಳ ವಿನಿಮಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.