* ಅಮೆರಿಕದ ಡಿಪಾರ್ಟ್ಮೆಂಟ್ ಆಫ್ ಜಸ್ಟೀಸ್ (DOJ), ಗೂಗಲ್ ವಿರುದ್ಧ ನಿಲುವನ್ನು 'ಮತ್ತಷ್ಟು ಕಠಿಣಗೊಳಿಸಿ, ಗೂಗಲ್ ನ ವೆಬ್ ಬ್ರೌಸರ್ ಕ್ರೋಮ್ ಅನ್ನು ಮಾರಾಟ ಮಾಡುವಂತೆ ಒತ್ತಾಯಿಸಿದೆ.* ಅಮೇರಿಕಾ ಡಿಒಜೆ, ಗೂಗಲ್ನ ಏಕಸ್ವಾಮ್ಯ ಕಡಿಮೆ ಮಾಡಲು ಕ್ರಮ ಕೈಗೊಂಡಿದ್ದು, ಮಾಜಿ ಅಧ್ಯಕ್ಷ ಜೋ ಬೈಡೆನ್ ಆಡಳಿತದ ನೀತಿಗೆ ಇದು ಪೂರಕವಾಗಿದೆ. ಗೂಗಲ್ ತನ್ನ 'ಸರ್ಚ್ ಎಂಜಿನ್ನಲ್ಲಿ ಪ್ರಭಾವ ಕಾಯ್ದುಕೊಳ್ಳಲು ಅನ್ಯಾಯಪೂರ್ಣ ಕ್ರಮಗಳನ್ನು ಅನುಸರಿಸಿದೆ ಎಂದು ಡಿಬಜೆ ಆರೋಪಿಸುತ್ತಿದೆ.* ಅಮೆರಿಕದ ನ್ಯಾಯ ಇಲಾಖೆಯ (DOJ) ವಾದದಂತೆ, ಸ್ಮಾರ್ಟ್ಫೋನ್ ಮತ್ತು ಲ್ಯಾಪ್ಟಾಪ್ ತಯಾರಕ ಕಂಪನಿಗಳಿಗೆ ಗೂಗಲ್ ಅಪಾರ ಹಣ ನೀಡಿದ್ದು, ಡಿಫಾಲ್ಟ್ ಸರ್ಚ್ ಎಂಜಿನ್ ಆಗಿ ಗೂಗಲ್ ಸರ್ಚ್ ಅನ್ನು ಹೊಂದಿಸಲು ಸಹಾಯ ಮಾಡಿದೆ.* 'ಅಮೆರಿಕದಲ್ಲಿ ಶೇ. 70ಕ್ಕಿಂತ ಹೆಚ್ಚು ಸರ್ಚ್ ರೆಸಲ್ಟ್ಗಳನ್ನು ಗೂಗಲ್ ನಿಯಂತ್ರಿಸುತ್ತಿದ್ದು, ಇದು ಇತರ ಸರ್ಚ್ ಎಂಜಿನ್ಗಳಿಗೆ ಸ್ಪರ್ಧಿಸಲು ಅಡಚಣೆಯಾಗುತ್ತಿದೆ. ಈ ಏಕಸ್ವಾಮ್ಯದ ವಿರುದ್ಧ ಡಿಒಜೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.* ಗೂಗಲ್ನ ಏಕಸ್ವಾಮ್ಯವನ್ನು ಕಡಿಮೆ ಮಾಡಲು, ಅದರ ವ್ಯವಹಾರಗಳನ್ನು ನಿಯಂತ್ರಿಸುವುದು ಅಗತ್ಯವಿದೆ ಎಂದು ಡಿಬಿಜೆ ಆಗ್ರಹಿಸಿದೆ. ಇದಕ್ಕಾಗಿ ಸ್ಮಾರ್ಟ್ಫೋನ್ ಮತ್ತು ಲ್ಯಾಪ್ಟಾಪ್ಗಳಲ್ಲಿ ಡಿಫಾಲ್ಟ್ ಬ್ರೌಸರ್ ಆಗಿರುವ ಕ್ರೋಮ್ ಅನ್ನು ತೆಗೆದುಹಾಕಬೇಕು ಎಂದು ಅವರು ಸೂಚಿಸಿದ್ದಾರೆ.