* ಪ್ಯಾರಿಸ್ನಲ್ಲಿ ನಡೆಯುತ್ತಿರುವ 'ಎಐ ಆ್ಯಕ್ಷನ್' ಶೃಂಗಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಗೂಗಲ್ ಸಿಇಒ ಸುಂದರ್ ಪಿಚೈ ಅವರನ್ನು ಭೇಟಿಯಾಗಿದ್ದು, ಭಾರತದ ಡಿಜಿಟಲ್ ರೂಪಾಂತರ ಕುರಿತು ಚರ್ಚೆ ನಡೆಸಿದ್ದಾರೆ.* ಕೃತಕ ಬುದ್ಧಿಮತ್ತೆಯ (ಎಐ) ನಿರ್ವಹಣಾ ವ್ಯವಸ್ಥೆಯಿಂದ ಭಾರತಕ್ಕೆ ಅಗಬಹುದಾದ ಅನುಕೂಲ, ಅನನುಕೂಲಗಳ ಬಗ್ಗೆ ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ.* 'ಪ್ಯಾರಿಸ್ನಲ್ಲಿ ನಡೆದ 'ಎಐ ಆಕ್ಷನ್' ಶೃಂಗಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿರುವುದು ಸಂತೋಷವಾಗಿದೆ.* ಕೃತಕ ಬುದ್ಧಿಮತ್ತೆಯಿಂದ (ಎಐ) ಭಾರತಕ್ಕೆ ಆಗುವಂತಹ ಪ್ರಯೋಜನ ಮತ್ತು ಭಾರತದ ಡಿಜಿಟಲ್ ರೂಪಾಂತರದಲ್ಲಿ ನಾವು ಒಟ್ಟಿಗೆ ಕೆಲಸಮಾಡುವ ವಿಧಾನಗಳ ಬಗ್ಗೆ ಚರ್ಚಿಸಿದ್ದೇವೆ' ಎಂದು ಪಿಚೈ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.* ಕೃತಕ ಬುದ್ಧಿಮತ್ತೆ ಸೇರಿದಂತೆ ಹೊಸ ತಂತ್ರಜ್ಞಾನ ಆವಿಷ್ಕಾರಗೊಂಡಾಗ ಯಾವುದೇ ಉದ್ಯೋಗಕ್ಕೆ ಕುತ್ತು ಬರುವುದಿಲ್ಲ. ಕೆಲಸದ ಸ್ವಭಾವಬದಲಾಗಬಹುದೇ ವಿನಾ ಕಡಿಮೆಯಾಗುವುದಿಲ್ಲ. ಬದಲಾಗಿ ಹೊಸಹೊಸ ರೀತಿಯ ಉದ್ಯೋಗಗಳು ಸೃಷ್ಟಿಯಾಗುತ್ತವೆ,’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು.