* ಜಗತ್ತಿನ ಪ್ರಖ್ಯಾತ ಸರ್ಜ್‌ ಇಂಜಿನ್‌ ಗೂಗಲ್‌ ಸಂಸ್ಥೆಯಲ್ಲಿ ಹೊಸ ಮುಖ್ಯ ತಂತ್ರಜ್ಞ  Chief Technology Officer.(CTO)ರಾಗಿ ಪ್ರಭಾಕರ್‌ ರಾಘವನ್‌ ಅವರು ನೇಮಕಗೊಂಡಿದ್ದಾರೆ. ಈಗ ಗೂಗಲ್ ಎಕ್ಸಿಕ್ಯೂಟಿವ್ ನಿಕ್ ಫಾಕ್ಸ್ ಅವರ ಸ್ಥಾನಕ್ಕೆ ರಾಘವನ್ ಅವರು ಬರಲಿದ್ದಾರೆ.* ಪ್ರಭಾಕರ್‌ ರಾಘವನ್‌ ಅವರು ಮದ್ರಾಸ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬ್ಯಾಚುಲರ್ ಆಫ್ ಟೆಕ್ನಾಲಜಿ ಮತ್ತು ಪಿಎಚ್ಡಿ ಪಡೆದಿದ್ದಾರೆ. ಯುಸಿ ಬ್ಲರ್ಕಿಯಿಂದ ಎಲೆಕ್ಟ್ರಿಕ್ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ಮಾಡಿದ್ದಾರೆ.* ಪ್ರಭಾಕರ್ ರಾಘವನ್ ನ್ಯಾಷನಲ್ ಅಕಾಡೆಮಿ ಆಫ್ ಎಂಜಿನಿಯರಿಂಗ್ನ ಸದಸ್ಯರಾಗಿದ್ದು, ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರ್ಸ್ ಮತ್ತು ಅಸೋಸಿಯೇಷನ್ ಫಾರ್ ಕಂಪ್ಯೂಟಿಂಗ್ ಮೆಷಿನರಿಯಲ್ಲಿ ಗುರುತಿಸಿಕೊಂಡಿದ್ದಾರೆ. ಇದಲ್ಲದೆ, ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ಸಲಹಾ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ್ದಾರೆ. ಎಸಿಎಮ್ನ ಮುಖ್ಯ ಸಂಪಾದಕರು ಆಗಿದ್ದರು. * 2009ರಲ್ಲಿ ಪ್ರಭಾಕರ್‌ ರಾಘವನ್‌ ಅವರಿಗೆ ಬೊಲೆಗ್ನಾ ವಿಶ್ವವಿದ್ಯಾಲಯ ಲಾರಿಯಾ ಗೌರವಾನಿತ್ವ ಸನ್ಮಾನವನ್ನು ಮಾಡಿ ಪ್ರಶಸ್ತಿಯನ್ನು ನೀಡಿದೆ.* ಗೂಗಲ್ ಸೇರುವ ಮೊದಲು Yahooನಲ್ಲಿ ಕೆಲಸ ಮಾಡುತ್ತಿದ್ದರು. ಜಾಹೀರಾತು ಶ್ರೇಯಾಂಕ, ಮಾರುಕಟ್ಟೆ ವಿನ್ಯಾಸದ ಮೇಲೆ ಹೆಚ್ಚು ಕೆಲಸ ಮಾಡುತ್ತಿದ್ದರು. ಐಬಿಎಮ್ನಲ್ಲಿ 14 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ.