* ವಿಶ್ವದ ಅತಿ ದೊಡ್ಡ ಶೋಧ ಎಂಜಿನ್, ಹತ್ತು ವರ್ಷಗಳ ಬಳಿಕ ತನ್ನ ಲೋಗೋದಲ್ಲಿನ 'G' ಅಕ್ಷರದಲ್ಲಿ ಹೊಸ ಬದಲಾವಣೆಯನ್ನು ಮಾಡಿದೆ.* ಈ ಬದಲಾವಣೆ ಬಣ್ಣದ ಮಟ್ಟಿಗೆ ಮಾತ್ರ ಸಂಭವಿಸಿದ್ದು, ಆಕಾರ ಮತ್ತು ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.* ಈ ಮೊದಲು ಗೂಗಲ್ನ 'ಜಿ' ಐಕಾನ್ನಲ್ಲಿ ಕೆಂಪು, ಹಳದಿ, ಹಸಿರು ಮತ್ತು ನೀಲಿ ಬಣ್ಣಗಳು ಪ್ರತ್ಯೇಕವಾಗಿ ತೋರಿಸುತ್ತಿದ್ದರೆ, ಈಗ ಅವುಗಳನ್ನು ಗ್ರೇಡಿಯೆಂಟ್ ಶೈಲಿಯಲ್ಲಿ ಬೆರೆಸಿ ತೋರಿಸಲಾಗಿದೆ.* ಈ ಹೊಸ ಲೋಗೋ ಮೇ 11ರಂದು ಗೂಗಲ್ನ ಐಎಸ್ಒ ಆ್ಯಪ್ ಅಪ್ಡೇಟ್ನಲ್ಲಿ ಮೊದಲ ಬಾರಿ ಕಾಣಿಸಿಕೊಂಡಿದೆ. ಪ್ರಸ್ತುತ ಈ ಬದಲಾವಣೆ 'G' ಐಕಾನ್ಗೆ ಮಾತ್ರ ಸೀಮಿತವಾಗಿದೆ ಎಂದು ತಿಳಿದುಬಂದಿದೆ.* ಗೂಗಲ್ ಕ್ರೋಮ್ ಮತ್ತು ಗೂಗಲ್ ಮ್ಯಾಪ್ಗಳಿಗೂ ಈ ಹೊಸ ಲೋಗೋ ಅನ್ವಯವಾಗುತ್ತದೆಯೇ ಎಂಬುದರ ಬಗ್ಗೆ ಗೂಗಲ್ ಯಾವುದೇ ಸ್ಪಷ್ಟನೆ ನೀಡಿಲ್ಲ.