* ಗುರು ಗ್ರಹವು ಸೌರಮಂಡಲದ ಏತಿ ದೊಡ್ಡ ಗ್ರಹವಾಗಿದ್ದು, ಗುರು ಗ್ರಹದ ಉಪಗ್ರಹಗಳ ಕುರಿತು ಹೆಚ್ಚಿನ ಸಂಶೋಧನೆಗಾಗಿ ಯುರೋಪಿಯನ್ ಬಾಹ್ಯಾಕಾಶ ಏಜೆನ್ಸಿ 'ಜ್ಯುಸ್ ಮಿಷನ್' ಅನ್ನು ಗುರುವಿನ ಕಕ್ಷೆಗೆ ಕಳುಹಿಸಲಾಗಿದೆ.* ಜ್ಯುಸ್ ಮಿಷನ್ ಎಂದರೆ ಜ್ಯುಪಿಟರ್ ಐಸಿ ಮೂನ್ಸ್ ಎಕ್ಸ್ ಪ್ಲೋರರ್ ಎಂದಾಗಿದ್ದು,ಗುರು ಗ್ರಹ ಮತ್ತು ಚಂದ್ರ ನ (ಉಪಗ್ರಹಗಳ) ಮೇಲ್ಮೈ ನಲ್ಲಿರುವ ಜೀವಿಗಳ ಕುರುಹ ಪತ್ತೆಗಾಗಿ  ಯುರೋಪಿಯನ್ ಸ್ಪೇಸ್ ಏಜೆನ್ಸಿ ಏರಿಯನ್ - 5 ರಾಕೆಟ್ ಮೂಲಕ ಜ್ಯುಸ್ ನೌಕೆಯನ್ನು ಆಕಾಶಕ್ಕೆ ಹರಿಸಲಾಯಿತ್ತು.* ಗುರು ಅಧ್ಯಯನಕ್ಕೆ 'ಜ್ಯುಸ್ ಮಿಷನ್' ಒಟ್ಟು 114,270 ಕೋಟಿ ವೆಚ್ಚದ ಕಾರ್ಯಾಚರಣೆ ಯಾಗಿದ್ದು, 5,963 ಕೆಜಿ ತೂಕದ ನೌಕೆಯು 8 ವರ್ಷ ಬಾಹ್ಯಾಕಾಶದಲ್ಲಿ ಪ್ರಯಾಣಿಸಿ 2031ರ ಜುಲೈನಲ್ಲಿ ಗುರು ಗ್ರಹದ ಕಕ್ಷೆಯನ್ನು ಸೇರಲಿದೆ.