* ಆರೋಗ್ಯ ಇಲಾಖೆ ಗುಣಮಟ್ಟ ಕಡಿಮೆ ಇರುವ ಔಷಧವನ್ನು ಮಾರುಕಟ್ಟೆಯಿಂದ ಶೀಘ್ರದಲ್ಲಿ ಹಿಂಪಡೆಯಲು ವಿಶೇಷ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ. ಈ ಮೂಲಕ 30 ದಿನ ಬೇಕಾಗುತ್ತಿದ್ದ ಪ್ರಕ್ರಿಯೆ ಇದೀಗ 2 ದಿನದಲ್ಲಿ ಮುಗಿಯುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.* ಅಪ್ಲಿಕೇಶನ್ ಮೂಲಕ ಔಷಧ ಪ್ರಯೋಗಾಲಯ ವರದಿಗಳನ್ನು ಇ-ಸಹಿಯಿಂದ ಜಿಲ್ಲಾಸ್ಥರದ ಅಧಿಕಾರಿಗಳಿಗೆ ರವಾನೆ ಮಾಡಿ, ಖಾಸಗಿ ವಿತರಕರ ಮೂಲಕ ಮೆಡಿಕಲ್ ಶಾಪ್ಗಳಿಂದ ಕಳಪೆ ಔಷಧ ಹಿಂಪಡೆಯಲಾಗುತ್ತದೆ. ಭವಿಷ್ಯದಲ್ಲಿ ಮೆಡಿಕಲ್ ಶಾಪ್ಗಳನ್ನೂ ಅಪ್ಲಿಕೇಶನ್ಗೆ ಜೋಡಿಸಲಾಗುವುದು.* ಜುಲೈ ತಿಂಗಳಲ್ಲಿ 1,433 ಔಷಧ ಮಾದರಿಗಳಲ್ಲಿ 59 ಕಳಪೆ ಎಂದು ಪತ್ತೆಹಚ್ಚಿ ಹಿಂಪಡೆಯಲಾಗಿದ್ದು, 231 ಅಂಗಡಿಗಳಿಗೆ ಶೋಕಾಸ್ ನೀಡಲಾಗಿದೆ.* ಇದೆ ಸಂದರ್ಭದಲ್ಲಿ ಆಹಾರದ ಗುಣಮಟ್ಟ ಪರಿಶೀಲನೆಗಾಗಿ 1557 ಬೀದಿಬದಿ ವ್ಯಾಪಾರಿಗಳನ್ನು ಪರಿಶೀಲಿಸಿ 406 ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ.* 545 ಆಹಾರ ಮಾದರಿಗಳನ್ನು ಅಂಗನವಾಡಿ ಕೇಂದ್ರಗಳಿಂದ, ಹಾಗೂ 175 ಹಾಲು ಮಾದರಿಗಳನ್ನು ಕೆಎಂಎಫ್ ಮತ್ತು ಖಾಸಗಿ ಕಂಪನಿಗಳಿಂದ ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ.* ಅಡುಗೆ ಎಣ್ಣೆಯಲ್ಲಿ ಶೇ.2ಕ್ಕಿಂತ ಅಧಿಕ ಕೊಬ್ಬಿನಾಂಶ ಪತ್ತೆಯಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.