* ಖ್ಯಾತ ಉರ್ದು ಕವಿ ಗುಲ್ಜಾರ್ ಮತ್ತು ಸಂಸ್ಕೃತ ವಿದ್ವಾಂಸ ಜಗದ್ಗುರು ರಾಮಭದ್ರಾಚಾರ್ಯ ಅವರು 58ನೇ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಜ್ಞಾನಪೀಠ ಆಯ್ಕೆ ಸಮಿತಿ 2024 ಫೆಬ್ರುವರಿ 17 ರಂದು (ಶನಿವಾರ) ಪ್ರಕಟಿಸಿದೆ.* '2023ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಯನ್ನು ಉರ್ದು ಮತ್ತು ಸಂಸ್ಕೃತ ಈ ಎರಡು ಭಾಷೆಗಳ ಪ್ರಮುಖ ಲೇಖಕರಿಗೆ ನೀಡಲು ನಿರ್ಧರಿಸಲಾಗಿತ್ತು. ಈ ನಿಟ್ಟಿನಲ್ಲಿ ಉರ್ದು ಭಾಷೆಗೆ ಗುಲ್ದಾರ್ ಅವರನ್ನು ಮತ್ತು ಸಂಸ್ಕೃತಕ್ಕೆ ರಾಮಭದ್ರಾಚಾರ್ಯ ಅವರನ್ನು ಆಯ್ಕೆ ಮಾಡಲಾಗಿದೆ' ಎಂದು ಆಯ್ಕೆ ಸಮಿತಿಯು ತಿಳಿಸಿದೆ.* ಗುಲ್ಜಾರ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಸಂಪೂರಣ್ ಸಿಂಗ್ ಕಲ್ರಾ ಅವರು ಹಿಂದಿ ಚಿತ್ರರಂಗದಲ್ಲಿ ಅವರ ಕೃತಿಗಳಿಗಾಗಿ ಆಚರಿಸಲ್ಪಡುತ್ತಾರೆ ಮತ್ತು ಈ ಯುಗದ ಅತ್ಯುತ್ತಮ ಉರ್ದು ಕವಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ.* ಚಿತ್ರಕೂಟದಲ್ಲಿ ತುಳಸಿ ಪೀಠದ ಸಂಸ್ಥಾಪಕ ಮತ್ತು ಮುಖ್ಯಸ್ಥರಾದ ರಾಮಭದ್ರಾಚಾರ್ಯರು ಹೆಸರಾಂತ ಹಿಂದೂ ಆಧ್ಯಾತ್ಮಿಕ ನಾಯಕ, ಶಿಕ್ಷಣತಜ್ಞ ಮತ್ತು ನಾಲ್ಕು ಮಹಾಕಾವ್ಯಗಳು ಸೇರಿದಂತೆ 240 ಕ್ಕೂ ಹೆಚ್ಚು ಪುಸ್ತಕಗಳು ಮತ್ತು ಪಠ್ಯಗಳ ಬರಹಗಾರರಾಗಿದ್ದಾರೆ.* ಅಕಾಡೆಮಿ ಪ್ರಶಸ್ತಿ (2002), ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ (2013), ಪದ್ಮ ಭೂಷಣ (2004) ಹಾಗೂ ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗುಲ್ಜಾರ್  ಅವರು ಮುಡಿಗೇರಿಸಿಕೊಂಡಿದ್ದಾರೆ.* ಮಧ್ಯ ಪ್ರದೇಶದ ಚಿತ್ರಕೂಟದ ತುಳಸಿ ಪೀಠದ ಸಂಸ್ಥಾಪಕ ಮತ್ತು ಮುಖ್ಯಸ್ಥರಾದ ರಾಮಭದ್ರಾಚಾರ್ಯರು ಪ್ರಸಿದ್ದ ಹಿಂದೂ ಆಧ್ಯಾತ್ಮಿಕ ಮುಖಂಡರು ಮತ್ತು ಶಿಕ್ಷಣ ತಜ್ಞರು. ಕವಿ ಮತ್ತು ಬರಹಗಾರರೂ ಆಗಿರುವ 74 ವರ್ಷದ ಅವರು ಸಂಸ್ಕೃತ, ಹಿಂದಿ, ಮೈಥಿಲಿ ಸೇರಿದಂತೆ ವಿವಿಧ ಭಾಷೆಗಳಲ್ಲಿ 100ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. * 22 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು ಎಂಬುದು ಇವರ ಮತ್ತೊಂದು ವಿಶೇಷ. 2015ರಲ್ಲಿ ಇವರಿಗೆ 'ಪದ್ಮ ವಿಭೂಷಣ'  ಪ್ರಶಸ್ತಿ ದೊರಕಿತ್ತು.* 'ರಾಮಾನಂದ' ಪಂಥದ ನಾಲ್ವರು ಜಗದ್ಗುರು ರಾಮಾನಂದಾಚಾರ್ಯರ ಪೈಕಿ ರಾಮಭದ್ರಾಚಾರ್ಯರು  ಇವರೂ ಒಬ್ಬರಾಗಿದ್ದು, 1982ರಿಂದಲೂ ಈ ಸ್ಥಾನವನ್ನು ಅಲಂಕರಿಸಿದ್ದಾರೆ.