* ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರುವರಿ 25 ರಂದು ಗುಜರಾತ್ನಲ್ಲಿ ಅತಿ ಉದ್ದದ ಸುದರ್ಶನ ಕೇಬಲ್ ಸೇತುವೆಯನ್ನು ಉದ್ಘಾಟಿಸಿದರು. * ಈ ಸುದರ್ಶನ ಸೇತುವೆ 2.5 ಕಿ.ಮೀ ಉದ್ದದ ಕೇಬಲ್ ಸೇತುವೆಯಾಗಿದೆ. ಸುದರ್ಶನ ಸೇತುವೆಯನ್ನು ಸುಮಾರು 980 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.* ಸುದರ್ಶನ ಕೇಬಲ್ ಸೇತುವೆಯನ್ನು ಓಖಾ-ಬೆಟ್ ದ್ವಾರಕಾ ಸಿಗ್ನೇಚರ್ ಸೇತುವೆ ಎಂದೂ ಕರೆಯಲಾಗುತ್ತದೆ.* ಸುದರ್ಶನ ಕೇಬಲ್ ಸೇತುವೆ ನಿರ್ಮಾಣದ ಮೊದಲು ಯಾತ್ರಿಕರು ದ್ವಾರಕಾಧೀಶ್ ದೇವಾಲಯ ತಲುಪಲು ದೋಣಿಗಳನ್ನು ಅವಲಂಬಿಸಬೇಕಿತ್ತು. 2.5 ಕಿ.ಮೀ ಉದ್ದದ ಈ ಸೇತುವೆಯನ್ನು 979 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ನಾಲ್ಕು ಪಥದ 27.20 ಮೀಟರ್ ಅಗಲವಿದ್ದು ಪ್ರತಿ ಬದಿಯಲ್ಲಿ 2.50 ಮೀಟರ್ ಅಗಲದ ಕಾಲುದಾರಿಗಳನ್ನು ಹೊಂದಿದೆ.* ಈ ಸೇತುವೆಯಿಂದ ಪ್ರಸಿದ್ಧ ದ್ವಾರಕಾಧೀಶ್ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಮತ್ತು ಯಾತ್ರಿಕರಿಗೆ ಅನುಕೂಲವಾಗಲಿದೆ ಎಂದು 2.3 ಕಿ ಮೀ ಉದ್ದದ ಸೇತುವೆಗೆ 2017ರ ಅಕ್ಟೋಬರ್‌ನಲ್ಲಿ ಪ್ರಧಾನಿ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು.