* ಜನವರಿ 11ರಿಂದ 14ರವರೆಗೆ ಅಹಮದಾಬಾದ್ನ ಸಾಬರಮತಿ ನದಿಯ ಮುಂಭಾಗ 'ಅಂತರರಾಷ್ಟ್ರೀಯ ಗಾಳಿಪಟ ಉತ್ಸವ-2025' ಅನ್ನು ಆಯೋಜಿಸಲಾಗಿದೆ.* ದೇಶದ ಗಾಳಿಪಟ ಮಾರುಕಟ್ಟೆಯಲ್ಲಿ ಗುಜರಾತ್ ಶೇ.65ರಷ್ಟು ಪಾಲನ್ನು ಹೊಂದಿದೆ. ಅಮೆರಿಕ, ಯುರೋಪ್ ಮತ್ತು ಕೆನಡಾದಂತಹ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ.* ಗುಜರಾತಿಗರು ಗಾಳಿಪಟವನ್ನು ಇಷ್ಟಪಡುವ ಕಾರಣದಿಂದ ಅತಿ ಹೆಚ್ಚು ಗಾಳಿಪಟಗಳನ್ನು ತಯಾರಿಸುವ ರಾಜ್ಯವಾಗಿ ಗುಜರಾತ್ ವಿಶ್ವದಲ್ಲಿ ಮನ್ನಣೆ ಗಳಿಸಿದೆ.* ಈ ವರ್ಷ 47 ದೇಶಗಳಿಂದ 143 ಅಂತರರಾಷ್ಟ್ರೀಯ ಗಾಳಿಪಟ ಹಾರಾಟಗಾರರು ಮತ್ತು ದೇಶದ 11 ರಾಜ್ಯಗಳಿಂದ 52 ಗಾಳಿಪಟ ಹಾರಾಟಗಾರರು ಉತ್ಸವದಲ್ಲಿ ಭಾಗವಹಿಸುತ್ತಿದ್ದಾರೆ.* ಏಕತಾ ಪ್ರತಿಮೆ (ಏಕ್ತಾ ನಗರ), ರಾಜ್ಕೋಟ್ ಮತ್ತು ವಡೋದರಾ ಸೇರಿದಂತೆ ರಾಜ್ಯದಾದ್ಯಂತ ವಿವಿಧ ಸ್ಥಳಗಳಲ್ಲಿ ಉತ್ಸವಗಳು ನಡೆಯಲಿವೆ. ಜನವರಿ 12 ರಂದು ಮತ್ತು ಸೂರತ್, ಶಿವರಾಜಪುರ ಮತ್ತು ಧೋರ್ಡೊ ಜನವರಿ 13 ರಂದು ನಡೆಯಲಿವೆ.* ಅಹಮದಾಬಾದ್, ನಾಡಿಯಾಡ್, ಖಂಭತ್ ಮತ್ತು ಸೂರತ್ ಗಾಳಿಪಟ ಉತ್ಪಾದನಾ ಕೇಂದ್ರಗಳಾಗಿವೆ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ತಿಳಿಸಿದರು.* 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಪ್ರಧಾನಿ ಮೋದಿಯವರ ಭರವಸೆಯನ್ನು ಸಾಕಾರಗೊಳಿಸಲು ಗುಜರಾತ್ನ ಅಭಿವೃದ್ಧಿಯ ಗಾಳಿಪಟವು ಎತ್ತರಕ್ಕೆ ಏರಬೇಕು ಎಂದು ಅವರು ತಿಳಿಸಿದರು.