Job Description: * ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು 1.26 ಲಕ್ಷ ಕೋಟಿ ವೆಚ್ಚದಲ್ಲಿ ಮೂರು ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ಫೆಬ್ರುವರಿ 29 ರಂದು ಅನುಮೋದನೆ ನೀಡಿದೆ.* ಟಾಟಾ ಎಲೆಕ್ಟ್ರಾನಿಕ್ಸ್, ಪವರ್‌ಚಿಪ್ ಸೆಮಿಕಂಡಕ್ಟರ್, ಸಿಜಿ ಪವರ್, ರೆನೆಸಾಸ್ ಎಲೆಕ್ಟ್ರಾನಿಕ್ಸ್, ಸ್ಟಾರ್ಸ್ ಮೈಕ್ರೋಎಲೆಕ್ಟ್ರಾನಿಕ್ಸ್, ಮತ್ತು ಟಾಟಾ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ ಪ್ರೈವೇಟ್ ಲಿಮಿಟೆಡ್‌ನಿಂದ ಹೂಡಿಕೆಯೊಂದಿಗೆ ಧೋಲೆರಾ ಮತ್ತು ಸನಂದ್, ಗುಜರಾತ್ ಮತ್ತು ಅಸ್ಸಾಂನಲ್ಲಿ ಸೆಮಿಕಂಡಕ್ಟರ್ ಘಟಕಗಳ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.* ಅವುಗಳಲ್ಲಿ ಎರಡು ಘಟಕಗಳು ಗುಜರಾತ್‌ನಲ್ಲಿ ಹಾಗೂ ಒಂದು ಘಟಕವನ್ನು ಅಸ್ಸಾಂನಲ್ಲಿ ಸ್ಥಾಪಿಸಲಾಗುವುದು.* ಮೊದಲ ಘಟಕವನ್ನು ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಪವರ್‌ಚಿಪ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪ್, ತೈವಾನ್ ಧೋಲೆರಾದಲ್ಲಿ 91,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವುದು.* ಮತ್ತೊಂದು ಘಟಕವನ್ನು ಗುಜರಾತ್ ನ ಸನಂದ್‌ನಲ್ಲಿ 7,600 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. * ಸಿಜಿ ಪವರ್, ಜಪಾನ್‌ನ ರೆನೆಸಾಸ್ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಮತ್ತು ಸ್ಟಾರ್ಸ್ ಮೈಕ್ರೋಎಲೆಕ್ಟ್ರಾನಿಕ್ಸ್, ಥಾಯ್ಲೆಂಡ್ ನ ಮೈಕ್ರೋ ಎಲೆ ಕ್ಟ್ರಾನಿಕ್ಸ್ ಸಹಭಾಗಿತ್ವದಲ್ಲಿ ಈ ಘಟಕವನ್ನು ಸ್ಥಾಪಿಸಲಾಗುವುದು.* ಅಸ್ಸಾಂ ನ ಮೋರಿಗಾಂವ್ ನಲ್ಲಿ 27 ಸಾವಿರ ಕೋಟಿ ರೂ ವೆಚ್ಚದಲ್ಲಿ ಮೂರನೇ ಘಟಕವನ್ನು ನಿರ್ಮಿಸಲಾಗುವುದು.* ವಾರ್ಷಿಕವಾಗಿ 4.8 ಕೋಟಿ ಚಿಪ್ ಗಳನ್ನೂ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ.