* ಕೇಂದ್ರ ಸರ್ಕಾರದ ಅಧಿಕೃತ ಹೇಳಿಕೆಯ ಪ್ರಕಾರ, ಆಗಸ್ಟ್ ನಲ್ಲಿ ಸರಕು ಮತ್ತು ಸೇವಾ ತೆರಿಗೆ (Goods and Services Tax -GST) ಸಂಗ್ರಹವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 10 ರಷ್ಟು ಏರಿಕೆಯಾಗಿದ್ದು, 1,74,962 ಕೋಟಿ ರೂ.ಗೆ ತಲುಪಿದೆ.* ಆಗಸ್ಟ್ನಲ್ಲಿ ಒಟ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು ಶೇಕಡಾ 10 ರಷ್ಟು ಏರಿಕೆಯಾಗಿ ಸುಮಾರು 1.75 ಲಕ್ಷ ಕೋಟಿ ರೂ.ಗೆ ತಲುಪಿದೆ. ಜುಲೈನಲ್ಲಿ ₹1.82 ಲಕ್ಷ ಕೋಟಿ ಸಂಗ್ರಹವಾಗಿತ್ತು. ಕಳೆದ ವರ್ಷದ ಆಗಸ್ಟ್‌ನಲ್ಲಿ ₹1.59 ಲಕ್ಷ ಕೋಟಿ ವರಮಾನ ಸಂಗ್ರಹವಾಗಿತ್ತು. * ರಾಜ್ಯವಾರು ಮಹಾರಾಷ್ಟ್ರವು ಅತಿ ಹೆಚ್ಚು 26,367 ಕೋಟಿ ರೂ. ಜಿಎಸ್‌ಟಿ ಸಂಗ್ರಹಿಸಿದೆ. ಕರ್ನಾಟಕ(12,344 ಕೋಟಿ), ಗುಜರಾತ್ (10,344 ಕೋಟಿ), ತಮಿಳುನಾಡು(10,181 ಕೋಟಿ ರೂ), ಮತ್ತು ಹರಿಯಾಣ (8,623 ಕೋಟಿ ರೂ.) ನಂತರದ ಸ್ಥಾನಗಳಲ್ಲಿವೆ. * ರಾಜ್ಯವಾರು ಸಂಗ್ರಹ ಅಂಕಿ ಅಂಶಗಳು ಸರಕುಗಳ ಆಮದಿನ ಮೇಲೆ GST ಒಳಗೊಂಡಿಲ್ಲ. ಅತಿಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳ ಪೈಕಿ ಕರ್ನಾಟಕವು ಎರಡನೇ ಅತಿದೊಡ್ಡ ರಾಜ್ಯವಾಗಿದೆ. ಶೇ 11ರಷ್ಟು ಏರಿಕೆಯಾಗಿದ್ದು ಒಟ್ಟು ₹12344 ಕೋಟಿ ಸಂಗ್ರಹವಾಗಿದೆ.