* ಗ್ರಾಮೀಣ ಭಾರತದ ಸಾಕ್ಷರತೆಯ ಪ್ರಮಾಣವು ಕಳೆದ ದಶಕದಲ್ಲಿ ಶೇಕಡಾ 10 ಕ್ಕಿಂತ ಹೆಚ್ಚು ಏರಿಕೆಯಾಗಿದೆ ಎಂದು ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಜಯಂತ್ ಚೌದರಿ ಲೋಕ ಸಭೆಯಲ್ಲಿ ತಿಳಿಸಿದ್ದಾರೆ* ಸರ್ಕಾರದ ಅಂಕಿ ಅಂಶಗಳ ಪ್ರಕಾರ ಗ್ರಾಮೀಣ ಭಾರತದಲ್ಲಿನ ಸಾಕ್ಷರತೆಯ ಪ್ರಮಾಣವು 2011 ರಲ್ಲಿ 67.77% ರಿಂದ 2023-24 ರಲ್ಲಿ ಏಳು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಲ್ಲಿ 77.50% ಕ್ಕೆ ಏರಿದೆ.* ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಸಾಕ್ಷರತೆ ಶೇ.57.93 ರಿಂದ ಶೇ.70.4ಕ್ಕೆ ಮತ್ತು ಪುರುಷರ ಸಾಕ್ಷರತೆ 77.15% ರಿಂದ 84.7% ಕ್ಕೆ ಸುಧಾರಿಸಿದೆ.* ವಿಶೇಷವಾಗಿ ಗ್ರಾಮೀಣ ಭಾರತದಲ್ಲಿ ಸಾಕ್ಷರತೆಯ ಪ್ರಮಾಣವನ್ನು ಹೆಚ್ಚಿಸಲು ಹಲವಾರು ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಸಮಗ್ರ ಶಿಕ್ಷಾ ಅಭಿಯಾನ (2018-19 ರಿಂದ 2025-26), ಸಾಕ್ಷರ ಭಾರತ್ (2009-10 ರಿಂದ 2017-18), ಪಧನಾ ಲಿಖನಾ ಅಭಿಯಾನ (2020-21 ರಿಂದ 2021-22) ಉಲ್ಲಾಸ್-ನವ್ ಭಾರತ್ ಸಾಕ್ಷರತಾ ಕಾರ್ಯಕ್ರಮ (NILP) (2022-23 ರಿಂದ 2026-27) ಇಂತಹ ಮೊದಲಾದ ಕಾರ್ಯಕ್ರಗಳಿಂದ ಧನಾತ್ಮಕ ಫಲಿತಾಂಶ ಲಭಿಸಿದೆ.* ಶಾಲೆಯಿಂದ ಹೊರಗುಳಿದವರಿಗೆ ಉಲ್ಲಾಸ್ ಅಪ್ಲಿಕೇಶನ್ ಅನ್ನು ರೂಪಿಸಲಾಗಿದೆ. ಇದು ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ರೊಂದಿಗೆ ಹೊಂದಿಕೆಯಾಗುವ ಕೇಂದ್ರ ಪ್ರಾಯೋಜಿತ ಉಪಕ್ರಮವಾಗಿದೆ. * ಉಲ್ಲಾಸ್-ನವ್ ಭಾರತ್ ಸಾಕ್ಷರತಾ ಅಭಿಯಾನ 15 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ಉಲ್ಲಾಸ್ ಅಪ್ಲಿಕೇಶನ್ ಅನ್ನು 26 ಭಾಷೆಗಳಲ್ಲಿ ಅಭಿವೃದ್ಧಿ ಪಡಿದಿಸಲಿದೆ.