Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಕೇಂದ್ರದ ಮಹತ್ವದ ನಿರ್ಧಾರ: ಏಪ್ರಿಲ್ 1 ರಿಂದ ದೇಶಾದ್ಯಂತ 20% ಎಥೆನಾಲ್ ಮಿಶ್ರಿತ ಪೆಟ್ರೋಲ್ ಮಾರಾಟ ಕಡ್ಡಾಯ
Authored by:
Heena Sheregar
Date:
27 ಫೆಬ್ರುವರಿ 2026
➤
ಭಾರತದ ಇಂಧನ ಕ್ಷೇತ್ರದಲ್ಲಿ ಒಂದು ದೊಡ್ಡ ಬದಲಾವಣೆ ಘಟಿಸಲಿದೆ. ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಹೊಸ ಅಧಿಸೂಚನೆಯಂತೆ, ಮುಂಬರುವ
ಏಪ್ರಿಲ್ 1
ರಿಂದ ಸಾಮಾನ್ಯ ಪೆಟ್ರೋಲ್ ಮಾಯವಾಗಿ, ಅದರ ಜಾಗದಲ್ಲಿ
20% ಎಥೆನಾಲ್ ಮಿಶ್ರಿತ ಇಂಧನ (E20)
ಕಡ್ಡಾಯವಾಗಿ ಬಳಕೆಗೆ ಬರಲಿದೆ. ಸರಳವಾಗಿ ಹೇಳುವುದಾದರೆ, ನೀವು ಹಾಕಿಸುವ 1 ಲೀಟರ್ ಪೆಟ್ರೋಲ್ನಲ್ಲಿ
800 ಮಿಲಿ ಪೆಟ್ರೋಲ್
ಮತ್ತು
200 ಮಿಲಿ ಎಥೆನಾಲ್
ಇರುತ್ತದೆ. ಎಥೆನಾಲ್ ಎಂಬುದು ಕಬ್ಬು, ಮೆಕ್ಕೆಜೋಳ ಮತ್ತು ಧಾನ್ಯಗಳಿಂದ ತಯಾರಿಸುವ ಜೈವಿಕ ಇಂಧನ (Bio-fuel).
➤
ಏಪ್ರಿಲ್ 1 ರಿಂದ ಜಾರಿಯಾಗಲಿರುವ ಹೊಸ ನಿಯಮಗಳು:
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಫೆಬ್ರವರಿ 17 ರಂದು ಹೊರಡಿಸಿದ ಅಧಿಸೂಚನೆಯಲ್ಲಿ ಈ ಕೆಳಗಿನ ಪ್ರಮುಖ ಅಂಶಗಳನ್ನು ಉಲ್ಲೇಖಿಸಿದೆ:
- ಕಡ್ಡಾಯ E20 ಮಾರಾಟ:
ಎಲ್ಲಾ ತೈಲ ಕಂಪನಿಗಳು (OMCs) ಕಡ್ಡಾಯವಾಗಿ 20% ಎಥೆನಾಲ್ ಮಿಶ್ರಿತ ಪೆಟ್ರೋಲ್ ಅನ್ನು ಮಾತ್ರ ಮಾರಾಟ ಮಾಡಬೇಕು.
- ಆಕ್ಟೇನ್ ಸಂಖ್ಯೆ (RON 95):
ವಾಹನಗಳ ಎಂಜಿನ್ ಸುರಕ್ಷತೆಗಾಗಿ ಪೆಟ್ರೋಲ್ನಲ್ಲಿ ರಿಸರ್ಚ್ ಆಕ್ಟೇನ್ ಸಂಖ್ಯೆ (RON) ಕನಿಷ್ಠ 95 ಇರಬೇಕು. ಇದು ಎಂಜಿನ್ನಲ್ಲಿ ಅಸಮರ್ಪಕ ದಹನವನ್ನು (Engine Knocking) ತಡೆಯಲು ಸಹಕಾರಿ.
- BIS ಮಾನದಂಡ:
ಭಾರತೀಯ ಮಾನದಂಡಗಳ ಬ್ಯೂರೋ (BIS) ನಿಗದಿಪಡಿಸಿರುವ ಗುಣಮಟ್ಟವನ್ನು ತೈಲ ಸಂಸ್ಥೆಗಳು ಕಟ್ಟುನಿಟ್ಟಾಗಿ ಪಾಲಿಸಬೇಕು.
➤
ಎಥೆನಾಲ್ ಮಿಶ್ರಣ:
ಸರ್ಕಾರವು ಈ ಮೊದಲು 2030ರ ವೇಳೆಗೆ 20% ಎಥೆನಾಲ್ ಮಿಶ್ರಣದ ಗುರಿ ಹೊಂದಿತ್ತು. ಆದರೆ, 2022ರಲ್ಲಿ 10% ಮಿಶ್ರಣದ ಗುರಿಯನ್ನು ನಿಗದಿತ ಸಮಯಕ್ಕಿಂತ 5 ತಿಂಗಳು ಮುಂಚಿತವಾಗಿ ತಲುಪಿದ್ದರಿಂದ, ಈಗ ಈ ಗುರಿಯನ್ನು
2025-26
ನೇ ಸಾಲಿಗೆ ಮುನ್ನಡೆಸಲಾಗಿದೆ.
ಪ್ರಮುಖ ಲಾಭಗಳು:
- ವಿದೇಶಿ ವಿನಿಮಯ ಉಳಿತಾಯ:
2014 ರಿಂದ ಈವರೆಗೆ ಎಥೆನಾಲ್ ಮಿಶ್ರಣದಿಂದ ಭಾರತವು ಸುಮಾರು 1.40 ಲಕ್ಷ ಕೋಟಿ ರೂ. ಗಳಷ್ಟು ವಿದೇಶಿ ವಿನಿಮಯವನ್ನು ಉಳಿಸಿದೆ.
- ರೈತರಿಗೆ ಆಸರೆ:
ಎಥೆನಾಲ್ ಅನ್ನು ಕಬ್ಬು, ಮೆಕ್ಕೆಜೋಳ ಮತ್ತು ಹಾಳಾದ ಧಾನ್ಯಗಳಿಂದ ತಯಾರಿಸುವುದರಿಂದ ರೈತರಿಗೆ ಹೆಚ್ಚಿನ ಬೇಡಿಕೆ ಮತ್ತು ಲಾಭ ಸಿಗಲಿದೆ.
- ಪರಿಸರ ಸ್ನೇಹಿ:
ಪೆಟ್ರೋಲ್ ಜತೆ ಎಥೆನಾಲ್ ಬೆರೆಸುವುದರಿಂದ ಇಂಗಾಲದ ಹೊರಸೂಸುವಿಕೆ (Carbon Emission) ಗಣನೀಯವಾಗಿ ಕಡಿಮೆಯಾಗಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬರುತ್ತದೆ.
➤
ಹಳೆಯ ವಾಹನಗಳ ಮೇಲೆ ಇದರ ಪರಿಣಾಮ:
ಹೊಸ E20 ಇಂಧನವು ಪರಿಸರ ಸ್ನೇಹಿಯಾಗಿದ್ದರೂ, 2023ಕ್ಕಿಂತ ಮುಂಚಿತವಾಗಿ ತಯಾರಾದ ಹಳೆಯ ವಾಹನಗಳಲ್ಲಿ ಎಥೆನಾಲ್ನ ತುಕ್ಕು ಹಿಡಿಯುವ ಗುಣದಿಂದಾಗಿ ರಬ್ಬರ್ ಮತ್ತು ಪ್ಲಾಸ್ಟಿಕ್ ಬಿಡಿಭಾಗಗಳು ಬೇಗನೆ ಸವೆಯುವ ಸಂಭವವಿರುವುದಲ್ಲದೆ ಮೈಲೇಜ್ ಮತ್ತು ಎಂಜಿನ್ ದಕ್ಷತೆ ಶೇ. 3 ರಿಂದ 7 ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ, ಆದರೆ 2023ರ ನಂತರ ಮಾರುಕಟ್ಟೆಗೆ ಬಂದ 'E20 Ready' ವಾಹನಗಳಿಗೆ ಯಾವುದೇ ತಾಂತ್ರಿಕ ತೊಂದರೆಯಿರುವುದಿಲ್ಲ.
➤
ಗ್ರಾಹಕರ ಗಮನಕ್ಕೆ: ಆಕ್ಟೇನ್ 95 (RON 95):
ಸರ್ಕಾರವು ಕೇವಲ ಎಥೆನಾಲ್ ಬೆರೆಸುವುದಲ್ಲದೆ, ಪೆಟ್ರೋಲ್ನ ಗುಣಮಟ್ಟವನ್ನೂ ಹೆಚ್ಚಿಸಿದೆ. ಹೊಸ ನಿಯಮದ ಪ್ರಕಾರ ಪೆಟ್ರೋಲ್ನಲ್ಲಿ
RON 95
(Research Octane Number) ಇರಲೇಬೇಕು. ಇದು ಎಂಜಿನ್ ಒಳಗೆ ಇಂಧನ ಅಸಮರ್ಪಕವಾಗಿ ಉರಿಯುವುದನ್ನು (Knocking) ತಡೆಯುತ್ತದೆ. ಎಂಜಿನ್ ದೀರ್ಘಕಾಲ ಬಾಳಿಕೆ ಬರಲು ಮತ್ತು ಸುಗಮವಾಗಿ ಓಡಲು ಇದು ಸಹಕಾರಿ.
Take Quiz
Loading...