Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ: 21 ರಾಜ್ಯಗಳಲ್ಲಿ ಸೀಮೆಎಣ್ಣೆ ವಿತರಣೆಗೆ ಅನುಮತಿ
Authored by:
Akshata Halli
Date:
31 ಮಾರ್ಚ್ 2026
➤
ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ಎಲ್ಪಿಜಿ ಪೂರೈಕೆ ಸರಪಳಿಯಲ್ಲಿ ಉಂಟಾಗಿರುವ ವ್ಯತ್ಯಯ ಹಾಗೂ ಇಂಧನ ಅಭಾವದ ಆತಂಕವನ್ನು ಹೋಗಲಾಡಿಸಲು ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ಮಹತ್ವದ ನಿರ್ಧಾರ ಕೈಗೊಂಡಿದೆ. ಇದರನ್ವಯ,
'ಸೀಮೆಎಣ್ಣೆ ಮುಕ್ತ'
ರಾಜ್ಯಗಳು ಸೇರಿದಂತೆ
ಒಟ್ಟು 21 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ (PDS) ಅಡಿಯಲ್ಲಿ ಮುಂದಿನ 60 ದಿನಗಳ ಕಾಲ ತಾತ್ಕಾಲಿಕವಾಗಿ ಸೀಮೆಎಣ್ಣೆ ವಿತರಿಸಲು ಅನುಮತಿ ನೀಡಲಾಗಿದೆ
. ಅಡುಗೆ ಅನಿಲದ ಮೇಲಿನ ಒತ್ತಡವನ್ನು ತಗ್ಗಿಸಿ, ಸಾರ್ವಜನಿಕರ ಅಡುಗೆ ಮತ್ತು ದೀಪದ ಅಗತ್ಯಗಳನ್ನು ಪೂರೈಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಜಿಲ್ಲಾ ಮಟ್ಟದ ತೈಲ ಮಾರುಕಟ್ಟೆ ಕಂಪನಿಗಳಿಗೆ 5 ಸಾವಿರ ಲೀಟರ್ವರೆಗೆ ದಾಸ್ತಾನು ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
➤
ಪೂರೈಕೆ ವ್ಯತ್ಯಯಕ್ಕೆ ಕಾರಣ:
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಅಡುಗೆ ಅನಿಲದ ಪೂರೈಕೆ ಸರಪಳಿಯಲ್ಲಿ (Supply Chain) ಅಡಚಣೆ ಉಂಟಾಗಿದೆ. ಭಾರತವು ತನ್ನ ಒಟ್ಟು ಎಲ್ಪಿಜಿ ಅಗತ್ಯದ ಸುಮಾರು
ಶೇ 60ರಷ್ಟನ್ನು ಆಮದು
ಮಾಡಿಕೊಳ್ಳುತ್ತದೆ. ಇದರಲ್ಲಿ
ಶೇ 90ರಷ್ಟು ಪಾಲು ಕೊಲ್ಲಿ ರಾಷ್ಟ್ರಗಳಿಂದಲೇ
ಬರುತ್ತದೆ. ಯುದ್ಧದ ಪರಿಸ್ಥಿತಿಯಿಂದಾಗಿ ಆಮದು ಪ್ರಕ್ರಿಯೆ ನಿಧಾನವಾಗಿದ್ದು, ಮಾರುಕಟ್ಟೆಯಲ್ಲಿ ಸೀಮಿತ ದಾಸ್ತಾನಿನ ಆತಂಕ ಸೃಷ್ಟಿಯಾಗಿದೆ.
➤
ಸರ್ಕಾರದ ಹೊಸ ನಿಯಮಗಳು:
- ದಾಸ್ತಾನು ಮಿತಿ:
ಪ್ರತಿ ಜಿಲ್ಲೆಗೆ ಗೊತ್ತುಪಡಿಸಿದ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳ (OMCs) ಸೇವಾ ಕೇಂದ್ರಗಳು 5 ಸಾವಿರ ಲೀಟರ್ವರೆಗೆ ಸೀಮೆಎಣ್ಣೆಯನ್ನು ದಾಸ್ತಾನು ಮಾಡಲು ಅನುಮತಿ ನೀಡಲಾಗಿದೆ.
- ಆದ್ಯತೆ:
ಲಭ್ಯವಿರುವ ಎಲ್ಪಿಜಿಯನ್ನು ಸದ್ಯಕ್ಕೆ ಗೃಹ ಬಳಕೆಗೆ ಆದ್ಯತೆಯ ಮೇರೆಗೆ ನೀಡಲಾಗುತ್ತಿದೆ. ಹೋಟೆಲ್ ಮತ್ತು ವಾಣಿಜ್ಯ ಉದ್ದೇಶದ ಬಳಕೆದಾರರಿಗೆ ಪೂರೈಕೆಯಲ್ಲಿ ಕಡಿತ ಉಂಟಾಗಿರುವುದರಿಂದ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೀಮೆಎಣ್ಣೆ ಪರ್ಯಾಯವಾಗಿ ಕೆಲಸ ಮಾಡಲಿದೆ.
- ಸುರಕ್ಷತೆ:
ಸೀಮೆಎಣ್ಣೆ ಸಂಗ್ರಹಣೆ ಮತ್ತು ವಿತರಣೆಯ ಸಂದರ್ಭದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ.
➤
PDS ವ್ಯವಸ್ಥೆ:
ಸಾರ್ವಜನಿಕ ವಿತರಣಾ ವ್ಯವಸ್ಥೆಯು ಕೇವಲ ಆಹಾರ ಧಾನ್ಯಗಳಿಗೆ ಸೀಮಿತವಾಗಿರದೆ, ತುರ್ತು ಸಂದರ್ಭಗಳಲ್ಲಿ ಇಂಧನ ವಿತರಣೆಗೂ ಬಳಕೆಯಾಗುತ್ತದೆ.
Take Quiz
Loading...