* ಗೋವಾದಲ್ಲಿ ಪ್ರವಾಸಿಗರ ಸುಗಮ ಸಂಚಾರಕ್ಕಾಗಿ ಪೊಲೀಸರು ವಿಶಿಷ್ಟ ಕ್ಯೂಆರ್ ಕೋಡ್ ಪರಿಚಯಿಸಲು ಮುಂದಾಗಿದ್ದು, 12 ಗಂಟೆಗಳ ಕಾಲ ಮಾನ್ಯವಾಗುವ ಈ ಕ್ಯೂಆರ್ ಕೋಡ್ನ ನೆರವಿನಿಂದ ಪುನಃ ಪುನಃ ಪೊಲೀಸರಿಗೆ ವಾಹನಗಳ ದಾಖಲೆ ತೋರಿಸುವ ಅಗತ್ಯವಿರುವುದಿಲ್ಲ.* ಈ ಕ್ರಮ ಜಾರಿಗೆ ತಂದ ದೇಶದ ಮೊದಲ ರಾಜ್ಯ ಎಂಬ ಗೌರವ ಗೋವಾಗೆ ಸಿಗಲಿದೆ.* ಪ್ರವಾಸಿಗರ ಅನುಕೂಲಕ್ಕಾಗಿ ಈ ಕ್ಯೂಆರ್ ಕೋಡ್ ಪರಿಚಯಿಸಲಾಗಿದ್ದು, ಇದನ್ನು ಒಮ್ಮೆ ಸ್ಕ್ಯಾನ್ ಮಾಡಿದರೆ, ಪ್ರಯಾಣದ ವೇಳೆ ಪೊಲೀಸರಿಗೆ ತೋರಿಸುವ ಅವಶ್ಯಕತೆ ಇರುವುದಿಲ್ಲ.* 12 ಗಂಟೆಗಳ ಕಾಲ ಈ ಕ್ಯೂಆರ್ ಕೋಡ್ ಸಕ್ರಿಯವಾಗಿರಲಿದ್ದು, ಪೊಲೀಸರು ಪರಿಶೀಲನೆ ನಡೆಸಿದರೆ, ಪ್ರವಾಸಿಗರು ಕ್ಯೂಆರ್ ಕೋಡ್ ತೋರಿಸಿದರೆ ಸಾಕು.* ಈವರೆಗೆ 4 ಸಾವಿರ ಕ್ಯೂಆರ್ ಕೋಡ್ಗಳನ್ನು ಪೊಲೀಸರು ವಿತರಿಸಿದ್ದಾರೆ. ಗೋವಾದ ಪಡ್ರೆ ಕಾನ್ಸಿಕಾವೊ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಈ ಆಪ್ ಅಭಿವೃದ್ಧಿಪಡಿಸಿದ್ದಾರೆ.* ಗೋವಾ ಪೊಲೀಸರು ಕ್ವಿಕ್ ಪಾಸ್ ಎಂಬ ಮೊಬೈಲ್ ಅಪ್ಲಿಕೇಶನ್ ಪರಿಚಯಿಸಿದ್ದು, ವಾಹನ ತಪಾಸಣೆ ಮಾಡಿದಾಗ ಚಾಲಕರಿಗೆ ಕ್ಯೂ ಆರ್ ಕೋಡ್ ಸಂದೇಶವಾಗಿ ಕಳುಹಿಸಲಾಗುತ್ತದೆ.* ಕ್ವಿಕ್ ಪಾಸ್ ಅಪ್ಲಿಕೇಶನ್ ವಾಹನಗಳ ಫೋಟೋ, ಸ್ಥಳ, ತಪಾಸಣೆಗಳ ಸಂಖ್ಯೆ ಮೊದಲಾದ ಮಾಹಿತಿಯನ್ನು ಸಂಗ್ರಹಿಸುತ್ತದೆ.