Job Description: * ಪ್ರತಿಷ್ಠಿತ ವಿಶ್ವಕಪ್ ಚೆಸ್ ಪಂದ್ಯಾವಳಿಯು (FIDE World Cup Chess) ಇತ್ತೀಚೆಗೆ ಭಾರತದ ಗೊವಾ ರಾಜ್ಯದಲ್ಲಿ ಆರಂಭಗೊಂಡಿದೆ. ಈ ಬಾರಿ ಪಂದ್ಯಾವಳಿಯ ಟ್ರೋಫಿಯನ್ನು ಅನಾವರಣಗೊಳಿಸಿದ್ದು, ಅದಕ್ಕೆ ಭಾರತದ ಚೆಸ್ ದಂತಕಥೆ ಹಾಗೂ 5 ಬಾರಿ ವಿಶ್ವ ಚಾಂಪಿಯನ್ ಆಗಿರುವ ವಿಶ್ವನಾಥನ್ ಆನಂದ್ ಅವರ ಹೆಸರನ್ನು ಇಡಲಾಗಿದೆ.* ಈ ಟೂರ್ನಿಯಲ್ಲಿ ಭಾರತ ಸೇರಿದಂತೆ ಒಟ್ಟು 80 ದೇಶಗಳ 206 ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ. ಭಾರತದಿಂದ 24 ಮಂದಿ ಆಟಗಾರರು ಸ್ಪರ್ಧಿಸುತ್ತಿದ್ದಾರೆ. ಟೂರ್ನಿಯು ನವೆಂಬರ್ 27 ರ ವರೆಗೆ ನಡೆಯಲಿದೆ.* ಈ ಬಾರಿ ಚೆಸ್ ಕಪ್‌ಗೆ ಭಾರತದ ಶತತ್ಮಾನ ಅಗ್ರ ಚೆಸ್ ಆಟಗಾರ, ವಿಶ್ವ ಚೆಸ್ ಐಕಾನ್ ವಿಶ್ವನಾಥನ್ ಆನಂದ್ ಅವರ ಹೆಸರನ್ನು ನೀಡಿರುವುದು ವಿಶೇಷ ಆಕರ್ಷಣೆ. ಇದು ಭಾರತದ ಚೆಸ್ ಅಭಿವೃದ್ಧಿಗೆ ಪಡೆದ ಗೌರವಕ್ಕೆ ಮತ್ತೊಂದು ನಕ್ಷತ್ರ!* ಹಾಲಿ ವಿಶ್ವ ಚಾಂಪಿಯನ್ ಆಗಿರುವ ಡಿ. ಗುಕೇಶ್, ಹಾಗೆಯೇ ಪ್ರಜ್ಞಾನಂದ ಮತ್ತು ಅರ್ಜುನ್ ಎರಿಗೈಸಿ ಮುಂತಾದ ಪ್ರಮುಖ ಭಾರತೀಯ ಆಟಗಾರರು ಕಣದಲ್ಲಿದ್ದಾರೆ.* ಈ ಟೂರ್ನಿಯಲ್ಲಿ ಅಗ್ರ ಮೂರು ಸ್ಥಾನಗಳನ್ನು (Top-3) ಪಡೆಯುವ ಚೆಸ್ ಪಟುಗಳು 2026ರ ಕ್ಯಾಂಡಿಡೇಟ್ಸ್‌ (Candidates Tournament)ಗೆ ಅರ್ಹತೆಯನ್ನು ಪಡೆದುಕೊಳ್ಳಲಿದ್ದಾರೆ. ವಿಶ್ವನಾಥನ್ ಆನಂದ್ ಅವರ ಹೆಸರನ್ನು ಟ್ರೋಫಿಗೆ ಇಟ್ಟಿರುವುದು, ಭಾರತದ ಚೆಸ್ ಕ್ರೀಡೆಗೆ ಅವರ ಕೊಡುಗೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿರುವ ಅವರ ಗೌರವವನ್ನು ಪ್ರತಿಬಿಂಬಿಸುತ್ತದೆ.