* ರಾಷ್ಟ್ರೀಯ ಪ್ರಾಮುಖ್ಯತೆಯ ಕಾರ್ಯಕ್ರಮಗಳನ್ನು ಜನಭಾಗಿದಾರಿ'ಯಾಗಿ ರೂಪಿಸಲು ಕೇಂದ್ರ ಸರಕಾರ ಮುಂದಾಗಿದೆ.* ಜನವರಿ.26ರಂದು ನಡೆಯಲಿರುವ 76ನೇ ಗಣರಾಜ್ಯೋತ್ಸವ ಪರೇಡ್ ವೀಕ್ಷಣೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 10 ಸಾವಿರ ಜನರನ್ನು ವಿಶೇಷ ಅತಿಥಿಗಳಾಗಿ ಆಹ್ವಾನಿಸಿದೆ.* ದಿಲ್ಲಿಯ ಗಣತಂತ್ರ ಪರೇಡ್ ವೀಕ್ಷಿಸಲು, ಗ್ರಾಮಗಳ ಹಂತದಲ್ಲಿ ಆರು ಪ್ರಮುಖ ಸರಕಾರಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೆ ತಂದ ಸರಪಂಚರು, ಪರಿಸರ ಸಂರಕ್ಷಣೆ, ಜನರ ಆದಾಯ ವೃದ್ಧಿಗೆ ಶ್ರಮಿಸಿದ, ಆರೋಗ್ಯ, ನೀರು, ಪೌಷ್ಟಿಕತೆ, ನೈರ್ಮಲ್ಯ, ಮತ್ತು ಅಭ್ಯುದಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದವರಿಗೆ ಆಹ್ವಾನ ನೀಡಲಾಗಿದೆ. ಇದರೊಂದಿಗೆ, ಜನ್ಧನ್ ಯೋಜನೆ ಫಲಾನುಭವಿಗಳು, ಆದಿವಾಸಿಗಳು, ಕಲಾವಿದರು, ವನ್ ಧನ್ ವಿಕಾಸ್ ಯೋಜನೆ ಸದಸ್ಯರು, ಆಶಾ ಕಾರ್ಯಕರ್ತೆಯರು ಮತ್ತು ಮೈ ಭಾರತ್ ಸ್ವಯಂಸೇವಕರಿಗೂ ಆಹ್ವಾನ ಬಂದಿದೆ.