* ಮಹಾರಾಷ್ಟ್ರ ಸರ್ಕಾರವು ಶತಮಾನದಷ್ಟು ಹಳೆಯದಾದ ‘ಸಾರ್ವಜನಿಕ ಗಣೇಶೋತ್ಸವ’ವನ್ನು ‘ಮಹಾರಾಷ್ಟ್ರ ರಾಜ್ಯದ ಉತ್ಸವ’ವೆಂದು ಗುರುವಾರ(ಜುಲೈ 10) ಅಧಿಕೃತವಾಗಿ ಘೋಷಿಸಿದೆ. * ರಾಜ್ಯದ ಸಂಸ್ಕೃತಿ ಸಚಿವ ಆಶಿಷ್ ಶೆಲಾರ್ ಅವರು ವಿಧಾನಸಭೆಯಲ್ಲಿ ಈ ಬಗ್ಗೆ ಘೋಷಣೆ ಮಾಡಿದರು. ಅವರು ಈ ಸಂದರ್ಭ, ಗಣೇಶೋತ್ಸವವು ಕೇವಲ ಹಬ್ಬವಲ್ಲ, ಮಹಾರಾಷ್ಟ್ರದ ಸಂಸ್ಕೃತಿಯ ಹೆಮ್ಮೆ ಮತ್ತು ಗುರುತಿನ ಸಂಕೇತವಾಗಿದೆ ಎಂದು ಅಭಿಪ್ರಾಯಪಟ್ಟರು.* 1893ರಲ್ಲಿ ಲೋಕಮಾನ್ಯ ತಿಲಕ್ ಅವರು ಮಹಾರಾಷ್ಟ್ರದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಆರಂಭ ಹಾಕಿದ್ದರು. ಇದು ಸಾಮಾಜಿಕ ಏಕತೆ, ರಾಷ್ಟ್ರೀಯತೆ, ಸ್ವಾತಂತ್ರ್ಯ ಹೋರಾಟ, ಆತ್ಮಗೌರವ ಮತ್ತು ಸ್ಥಳೀಯ ಭಾಷೆಯ ಬಗ್ಗೆ ಹೆಮ್ಮೆ ಇವೆಲ್ಲವನ್ನು ಪ್ರತಿಬಿಂಬಿಸುತ್ತದೆ ಎಂದು ಶೆಲಾರ್ ಹೇಳಿದರು.* ಗಣೇಶೋತ್ಸವದ ಆಚರಣೆಗಾಗಿ ಪೊಲೀಸ್ ಭದ್ರತೆ, ಮೂಲಸೌಕರ್ಯ ಹಾಗೂ ಆರ್ಥಿಕ ನೆರವನ್ನೂ ಸರ್ಕಾರ ಒದಗಿಸಲಿದೆ. ವಿಶೇಷವಾಗಿ ಪುಣೆ ಮತ್ತು ಮುಂಬೈನಲ್ಲಿ ಈ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ನೆರವು ನೀಡಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.