* ವಿಶ್ವದ ಬಲಿಷ್ಠ ಸೇನೆ ಹೊಂದಿರುವ 10 ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ ಎಂದು 'ದಿ ಗ್ಲೋಬಲ್ ಫೈರ್ ಪವರ್ ಇಂಡೆಕ್ಸ್-2025' ವರದಿ ತಿಳಿಸಿದೆ.* ಆರ್ಥಿಕ ಸಂಕಷ್ಟದಲ್ಲಿದ್ದರೂ ಭಾರತದ ವಿರುದ್ಧ ಧ್ವನಿ ಎತ್ತುತ್ತಿರುವ ಪಾಕಿಸ್ತಾನ ಈ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದೆ ಎಂಬುದು ಗಮನಾರ್ಹವಾಗಿದೆ.* 60ಕ್ಕೂ ಹೆಚ್ಚು ಮಾನದಂಡಗಳಾದ ರಕ್ಷಣಾ ತಂತ್ರಜ್ಞಾನ, ಆರ್ಥಿಕ ಶಕ್ತಿ, ಸಾರಿಗೆ ವ್ಯವಸ್ಥೆ, ಭೌಗೋಳಿಕ ಹಕ್ಕು-ಹೆಮ್ಮೆಗಳು ಮತ್ತು ವ್ಯೂಹಾತ್ಮಕ ಕೌಶಲ್ಯಗಳನ್ನು ಆಧಾರವಾಗಿ ಇಟ್ಟುಕೊಂಡು ಈ ವರದಿ ತಯಾರಿಸಲಾಗಿದೆ.* ಟಾಪ್ 10 ಶಕ್ತಿಶಾಲಿ ಸೇನೆ ಹೊಂದಿರುವ ರಾಷ್ಟ್ರಗಳಲ್ಲಿ ಪಾಕಿಸ್ತಾನ ಒಳಗೊಳ್ಳಲಿಲ್ಲ. ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಅಮೆರಿಕ ಪಡೆದುಕೊಂಡಿದ್ದು, ರಷ್ಯಾ ದ್ವಿತೀಯ, ಚೀನಾ ತೃತೀಯ ಸ್ಥಾನದಲ್ಲಿವೆ.* ಇನ್ನು ಭಾರತ ನಾಲ್ಕನೇ ಸ್ಥಾನದಲ್ಲಿದ್ದು, ನಂತರ ದಕ್ಷಿಣ ಕೊರಿಯಾ (5), ಬ್ರಿಟನ್ (6), ಫ್ರಾನ್ಸ್ (7), ಜಪಾನ್ (8), ಟರ್ಕಿ (9), ಹಾಗೂ ಇಟಲಿ (10) ಸ್ಥಾನದಲ್ಲಿವೆ.ಭಾರತದ ಸೇನಾ ಸಾಮರ್ಥ್ಯ:- ಭಾರತೀಯ ಸೇನೆಗೆ ಒಟ್ಟು 14,55,550 ಸೈನಿಕರು, 2229 ಸೈನಿಕ ವಿಮಾನಗಳು ಸೇರಿವೆ. ಇವುಗಳಲ್ಲಿ 513 ಫೈಟರ್ ಜೆಟ್ಗಳು, 130 ವಿಶೇಷ ದಾಳಿಗೆ ವಿನ್ಯಾಸಗೊಳಿಸಿದ ವಿಮಾನಗಳು, 2 ವಿಮಾನವಾಹಕ ನೌಕೆಗಳು, 18 ಜಲಾಂತರ್ಗಾಮಿ ನೌಕೆಗಳು, 13 ಡಿಸ್ಟ್ರಾಯರ್ ನೌಕೆಗಳು ಮತ್ತು 14 ಫ್ರಿಗೇಟ್ಗಳು ಸೇರಿವೆ. ಜೊತೆಗೆ 4201 ಟ್ಯಾಂಕ್ಗಳು ಮತ್ತು 293 ನೌಕಾ ಹಡಗುಗಳಿರುವುದು ವಿಶೇಷ. ಅಗ್ನಿ ಹಾಗೂ ಬ್ರಹ್ಮಸ್ಂತಹ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕ್ಷಿಪಣಿಗಳಿಂದ ಭಾರತದ ಸೇನಾ ಶಕ್ತಿ ಮತ್ತಷ್ಟು ಬಲವಾಗಿದೆ ಎಂದು ವರದಿ ತಿಳಿಸುತ್ತದೆ.