Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಗ್ಲೋಬಲ್ ಟೀಚರ್ ಪ್ರಶಸ್ತಿ 2026: ಭಾರತದ ಹೆಮ್ಮೆಯ ಶಿಕ್ಷಕಿ ರೂಬಲ್ ನಾಗಿಗೆ ಜಾಗತಿಕ ಗೌರವ
Authored by:
Akshata Halli
Date:
6 ಫೆಬ್ರುವರಿ 2026
➤
ದುಬೈ:
ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿರುವ ಭಾರತದ ಖ್ಯಾತ ಶಿಕ್ಷಕಿ ಮತ್ತು ಸಮಾಜ ಸೇವಕಿ
ರೂಬಲ್ ನಾಗಿ (Roubel Nagi)
ಅವರಿಗೆ ಪ್ರತಿಷ್ಠಿತ
'ಗ್ಲೋಬಲ್ ಟೀಚರ್' (Global Teacher Prize)
ಪ್ರಶಸ್ತಿಯನ್ನು ಗುರುವಾರ (05-02-2026) ದುಬೈನಲ್ಲಿ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯು ವಿಶ್ವಮಟ್ಟದಲ್ಲಿ ಶಿಕ್ಷಕರಿಗೆ ನೀಡಲಾಗುವ ಅತ್ಯುನ್ನತ ಗೌರವವಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿನ ಅವರ ಅಪಾರ ಸಾಧನೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.
- ಈ ಪ್ರಶಸ್ತಿಯು
ಒಂದು ಮಿಲಿಯನ್ ಡಾಲರ್
(ಭಾರತೀಯ ರೂಪಾಯಿಗಳಲ್ಲಿ ಸುಮಾರು
₹8.4 ಕೋಟಿಗೂ ಹೆಚ್ಚು
) ನಗದು ಬಹುಮಾನವನ್ನು ಒಳಗೊಂಡಿದೆ.
➤ ರೂಬಲ್ ಅವರು ತಮ್ಮ ಪ್ರತಿಷ್ಠಾನದ ಮೂಲಕ ಭಾರತದಾದ್ಯಂತ ಸುಮಾರು
800ಕ್ಕೂ ಹೆಚ್ಚು ಕಲಿಕಾ ಕೇಂದ್ರಗಳನ್ನು
ಸ್ಥಾಪಿಸಿದ್ದಾರೆ.
ವಿಶಿಷ್ಟ ಬೋಧನಾ ಶೈಲಿ:
ಕೊಳೆಗೇರಿಗಳ ಗೋಡೆಗಳ ಮೇಲೆ ಆಕರ್ಷಕ ಚಿತ್ರಗಳನ್ನು ಬಿಡಿಸುವ ಮೂಲಕ (Mural Art), ಮಕ್ಕಳಿಗೆ ವಿಜ್ಞಾನ, ಗಣಿತ, ಸಾಹಿತ್ಯ ಮತ್ತು ಇತಿಹಾಸದಂತಹ ವಿಷಯಗಳನ್ನು ಅತ್ಯಂತ ಸರಳವಾಗಿ ಬೋಧಿಸುತ್ತಿರುವುದು ಇವರ ವಿಶೇಷತೆ.
➤ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರೂಬಲ್ ನಾಗಿ ಅವರು, "ಶಾಲೆಗೆ ಹೋಗಲಾಗದ ಮತ್ತು ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ರಚನಾತ್ಮಕ ಕಲಿಕೆಯನ್ನು ಒದಗಿಸುವುದೇ ನನ್ನ ಮುಖ್ಯ ಗುರಿ. ಈ ಪ್ರಶಸ್ತಿಯ ಮೊತ್ತವನ್ನು ಬಡ ಯುವಜನತೆಗಾಗಿ
ಉಚಿತ ವೃತ್ತಿ ತರಬೇತಿ ಕೇಂದ್ರಗಳನ್ನು (Vocational Training Centers)
ಸ್ಥಾಪಿಸಲು ಬಳಸಲಾಗುವುದು," ಎಂದು ತಿಳಿಸಿದ್ದಾರೆ.
➤ ಗ್ಲೋಬಲ್ ಟೀಚರ್ ಪ್ರಶಸ್ತಿ: 2015ರಲ್ಲಿ ವರ್ಕಿ ಫೌಂಡೇಶನ್ನಿಂದ ಸ್ಥಾಪಿಸಲ್ಪಟ್ಟ, ಜಗತ್ತಿನಾದ್ಯಂತ ಶಿಕ್ಷಣದ ಗುಣಮಟ್ಟ ಸುಧಾರಿಸಲು ಶ್ರಮಿಸುವ ಶಿಕ್ಷಕರನ್ನು ಗೌರವಿಸುವ ಈ ಪ್ರಶಸ್ತಿಗೆ ರೂಬಲ್ ನಾಗಿ ಅವರು ವಿಶ್ವದ 10ನೇ ಸಾಧಕಿಯಾಗಿ ಆಯ್ಕೆಯಾಗಿದ್ದಾರೆ ಮತ್ತು ಈ ಹಿಂದೆ 2020ರಲ್ಲಿ ಮಹಾರಾಷ್ಟ್ರದ
ರಂಜಿತ್ ಸಿನ್ಹಾ ಡಿಸಾಲೆ
ಅವರು ಈ ಪ್ರಶಸ್ತಿ ಪಡೆದ ಮೊದಲ ಭಾರತೀಯರಾಗಿದ್ದರು ಎಂಬುದು ಗಮನಾರ್ಹ.
Take Quiz
Loading...