* ನ್ಯಾಯ, ಪ್ರೀತಿ ಮತ್ತು ಶಾಂತಿಯನ್ನು ಸ್ಥಾಪಿಸುವ ಉದ್ದೇಶದೊಂದಿಗೆ ವಿಶ್ವದ ಬೃಹತ್ ಶೃಂಗಸಭೆ(Global Peace Summit) ಏಪ್ರಿಲ್ 12 ಮತ್ತು 13ರಂದು ದುಬೈನಲ್ಲಿ ನಡೆಯಲಿದೆ.* ಜಗತ್ತಿನೆಲ್ಲೆಡೆಯಿಂದ 2,800ಕ್ಕೂ ಹೆಚ್ಚು ಶಾಂತಿ ತತ್ವ ಪ್ರತಿಪಾದಕರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಅವರೆಲ್ಲರ ಸಮ್ಮುಖದಲ್ಲಿ “ಐ ಆಮ್ ಪೀಸ್ ಕೀಪರ್ ಮೂವ್ಮೆಂಟ್” ಶೃಂಗಾಸಭೆಯು ಗಮನ ಸೆಳೆಯಲಿದೆ.* "ಒಂದು ಗ್ರಹ, ಒಂದು ಧ್ವನಿ: ಜಾಗತಿಕ ನ್ಯಾಯ, ಪ್ರೀತಿ ಮತ್ತು ಶಾಂತಿ" ಎಂಬ ಧೇಯವಾಕ್ಯದೊಂದಿಗೆ ದುಬೈನ ಎಕ್ಸ್ ಪೋ ಸಿಟಿಯ ಪ್ರದರ್ಶನ ಕೇಂದ್ರದಲ್ಲಿ ನಡೆಯಲಿದೆ.* ಶೃಂಗಸಭೆಯು ನ್ಯಾಯ ಮತ್ತು ಶಾಂತಿಯ ಹಂಚಿಕೆಯ ಮೌಲ್ಯಗಳ ಮೂಲಕ ಸಾರ್ವತ್ರಿಕ ಸಾಮರಸ್ಯವನ್ನು ಉತ್ತೇಜಿಸುತ್ತದೆ.* ಹತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತರು, ಜಾಗತಿಕ ಚಿಂತಕರು, ಉದ್ಯಮಿಗಳು, ಸಾಂಸ್ಕೃತಿಕ ಗಣ್ಯರು, ಕ್ರೀಡಾ ಕ್ಷೇತ್ರದ ದಿಗ್ಗಜರು, ಶಾಂತಿ ಮತ್ತು ನ್ಯಾಯದ ಪ್ರತಿಪಾದಕರು ಸೇರಿದಂತೆ 72 ಭಾಷಣಕಾರರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ.* ನ್ಯಾಯ, ಸಮಾನತೆ, ಶಾಂತಿ ಸ್ಥಾಪನೆಗೆ ಅತ್ಯುತ್ತಮ ಕೊಡುಗೆ ನೀಡಿದ 28 ವ್ಯಕ್ತಿಗಳಿಗೆ ಮತ್ತು ಸಂಸ್ಥೆಗಳಿಗೆ ನ್ಯಾಯ , ಪ್ರೀತಿ ಮತ್ತು ಶಾಂತಿ ಪ್ರಶಸ್ತಿ ಎಂಬ ಮೂರು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ.* ಚಾಂಪಿಯನ್ ಜಡ್ಜ್ ಆಫ್ ಜಡ್ಜಸ್, ವರ್ಲ್ಡ್ ವುಮನ್-ಇನ್-ಲಾ, ಗ್ಲೋಬಲ್ ನಾನ್-ವೈಲೆನ್ಸ್ ಅವಾರ್ಡ್ ಎಂಬ ಪ್ರಶಸ್ತಿಗಳನ್ನು ಒಳಗೊಂಡಿವೆ.* ಅಂತರರಾಷ್ಟ್ರೀಯ ಸಮಿತಿಯು 84 ನಾಮನಿರ್ದೇಶಿತರಿಂದ 28 ಸದಸ್ಯರ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡುತ್ತದೆ.