Job Description: ➤ ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿ (R&D) ಕ್ಷೇತ್ರದಲ್ಲಿ ಐತಿಹಾಸಿಕ ಬದಲಾವಣೆಯಾಗಿದೆ. ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (WIPO) ಬಿಡುಗಡೆ ಮಾಡಿರುವ ಜಾಗತಿಕ ನಾವೀನ್ಯತೆ ಸೂಚ್ಯಂಕ (Global Innovation Index - GII) 2025 ರ ವರದಿಯ ಪ್ರಕಾರ, ಸಂಶೋಧನಾ ವೆಚ್ಚದಲ್ಲಿ ಚೀನಾ ಈಗ ಅಮೆರಿಕವನ್ನು ಹಿಂದಿಕ್ಕಿ ವಿಶ್ವದ ನಂಬರ್ 1 ರಾಷ್ಟ್ರವಾಗಿ ಹೊರಹೊಮ್ಮಿದೆ. ಭಾರತವು ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ. 2024 ರಲ್ಲಿ ಭಾರತವು $75.7 ಬಿಲಿಯನ್ ವೆಚ್ಚ ಮಾಡುವ ಮೂಲಕ ಜಾಗತಿಕವಾಗಿ 7ನೇ ಸ್ಥಾನವನ್ನು ಅಲಂಕರಿಸಿದೆ. ➤ ಜಾಗತಿಕ ನಾವೀನ್ಯತೆ ಸೂಚ್ಯಂಕ (GII) ಎಂಬುದು ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (WIPO) ವಾರ್ಷಿಕವಾಗಿ ಪ್ರಕಟಿಸುವ ವರದಿಯಾಗಿದ್ದು, ಇದು ಶಿಕ್ಷಣ ಮತ್ತು ಮೂಲಸೌಕರ್ಯದಂತಹ ಹೂಡಿಕೆಗಳನ್ನು (Inputs) ಹಾಗೂ ಪೇಟೆಂಟ್ ಮತ್ತು ಹೈಟೆಕ್ ಉತ್ಪಾದನೆಯಂತಹ ಫಲಿತಾಂಶಗಳನ್ನು (Outputs) ಆಧರಿಸಿ ವಿಶ್ವದ ದೇಶಗಳ ನಾವೀನ್ಯತಾ ಸಾಮರ್ಥ್ಯವನ್ನು ಅಳೆಯುವ ಮಾನದಂಡವಾಗಿದೆ. ➤ ಜಾಗತಿಕ R&D ವೆಚ್ಚ: 2000ನೇ ಇಸವಿಯಿಂದ ಈಚೆಗೆ ಜಾಗತಿಕ ಸಂಶೋಧನಾ ವೆಚ್ಚವು ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಪ್ರಸ್ತುತ ಏಷ್ಯಾ ಖಂಡವು ಒಟ್ಟು ಜಾಗತಿಕ ವೆಚ್ಚದ 45% ಪಾಲನ್ನು ಹೊಂದುವ ಮೂಲಕ ತಂತ್ರಜ್ಞಾನ ಕ್ಷೇತ್ರದಲ್ಲಿ ಪಾಶ್ಚಿಮಾತ್ಯ ದೇಶಗಳ ಪ್ರಾಬಲ್ಯವನ್ನು ಸವಾಲು ಮಾಡುತ್ತಿದೆ. ➤ 2024 ರಲ್ಲಿ ಚೀನಾ ಸಂಶೋಧನೆಗಾಗಿ $785.9 ಬಿಲಿಯನ್ ಹಂಚಿಕೆ ಮಾಡಿದೆ. ಇದು 2000ನೇ ಇಸವಿಗೆ ಹೋಲಿಸಿದರೆ 20 ಪಟ್ಟು ಹೆಚ್ಚಳವಾಗಿದೆ. ಕೃತಕ ಬುದ್ಧಿಮತ್ತೆ (AI), ಸೆಮಿಕಂಡಕ್ಟರ್ ಮತ್ತು ಸುಧಾರಿತ ಉತ್ಪಾದನಾ ವಲಯಗಳಲ್ಲಿ ಚೀನಾ ನಡೆಸುತ್ತಿರುವ ನಿರಂತರ ಹೂಡಿಕೆ ಈ ಸಾಧನೆಗೆ ಕಾರಣವಾಗಿದೆ.ಅಮೆರಿಕವು $781.8 ಬಿಲಿಯನ್ ವೆಚ್ಚದೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದೆ. ಅಮೆರಿಕದ ಹೂಡಿಕೆ ದ್ವಿಗುಣಗೊಂಡಿದ್ದರೂ, ಜಾಗತಿಕ ಮಾರುಕಟ್ಟೆಯಲ್ಲಿ ಅದರ ಪಾಲು ಕಳೆದ 24 ವರ್ಷಗಳಲ್ಲಿ 9.7% ರಷ್ಟು ಕುಸಿದಿದೆ. ➤ ಭಾರತದ ಪ್ರಗತಿ ಮತ್ತು ಸ್ಥಾನಮಾನ: 2024ರಲ್ಲಿ $75.7 ಬಿಲಿಯನ್ ಹೂಡಿಕೆ ಮಾಡುವ ಮೂಲಕ ಜಾಗತಿಕವಾಗಿ 7ನೇ ಸ್ಥಾನಕ್ಕೇರಿದೆ. 2000ನೇ ಇಸವಿಯಲ್ಲಿ ಕೇವಲ $20.8 ಬಿಲಿಯನ್ ಇದ್ದ ಹೂಡಿಕೆ ಈಗ ಮೂರು ಪಟ್ಟು ಹೆಚ್ಚಾಗಿರುವುದು ದೇಶದ ನಾವೀನ್ಯತೆಯ ವೇಗಕ್ಕೆ ಸಾಕ್ಷಿಯಾಗಿದೆ. ಇದರ ಫಲವಾಗಿ, ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ (GII) ಭಾರತವು 2019ರಲ್ಲಿ 66ನೇ ಸ್ಥಾನದಲ್ಲಿದ್ದರೆ, ಇದೀಗ 38ನೇ ಸ್ಥಾನಕ್ಕೆ ಜಿಗಿಯುವ ಮೂಲಕ ಐತಿಹಾಸಿಕ ಪ್ರಗತಿ ದಾಖಲಿಸಿದೆ. ➤ ಟಾಪ್ 10 R&D ಹೂಡಿಕೆ ರಾಷ್ಟ್ರಗಳು (2024-25): 1.ಚೀನಾ-$785.9 ಬಿಲಿಯನ್ 2. ಅಮೆರಿಕ-$781.8 ಬಿಲಿಯನ್ 3. ಜಪಾನ್-$186.0 ಬಿಲಿಯನ್ 4. ಜರ್ಮನಿ-$132.2 ಬಿಲಿಯನ್ 5. ದಕ್ಷಿಣ ಕೊರಿಯಾ-$126.4 ಬಿಲಿಯನ್ 6. ಯುನೈಟೆಡ್ ಕಿಂಗ್‌ಡಮ್-$86.5 ಬಿಲಿಯನ್ 7. ಭಾರತ-$75.7 ಬಿಲಿಯನ್ 8. ಫ್ರಾನ್ಸ್-$65.8 ಬಿಲಿಯನ್ 9. ಟರ್ಕಿ-$43.2 ಬಿಲಿಯನ್ 10. ಬ್ರೆಜಿಲ್-$38.4 ಬಿಲಿಯನ್ಪ್ರತಿ ದಿನದ ಉದ್ಯೋಗ ಮಾಹಿತಿ ಅಪ್ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ