* ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕ ಸಂಘದ ಕೈಮಗ್ಗ ಪಟ್ಟೆದಂಚು ಸೀರೆಗೆ ಭೌಗೋಳಿಕ ಮಾನ್ಯತೆ (ಜಿಐ ಟ್ಯಾಗ್) ಲಭಿಸಿದೆ. ಸೀರೆಯ ಅಂಚಿನ ಪಟ್ಟೆ ವಿನ್ಯಾಸದಿಂದ ಈ ಹೆಸರು ಬಂದಿದೆ.* ಪರಿಶುದ್ಧ ಹತ್ತಿ, ಪರಿಸರ ಸ್ನೇಹಿ ಬಣ್ಣ ಹಾಗೂ ನೈಸರ್ಗಿಕ ಅಂಟು ಬಳಸಿ ತಯಾರಿಸುವ ಈ ಸೀರೆ ಎಲ್ಲ ಋತುಗಳಿಗೆ ಹೊಂದುತ್ತದೆ.* ಪಟ್ಟೆದಂಚು ಸೀರೆಯ ಇತಿಹಾಸ 200 ವರ್ಷಗಳಷ್ಟು ಹಳೆಯದು. ಸಂಘವು ಸ್ವಾತಂತ್ರ್ಯಪೂರ್ವದಲ್ಲಿ ಸ್ಥಾಪನೆಯಾಗಿ ಈಗ 8 ದಶಕಗಳನ್ನು ಪೂರೈಸಿದೆ.* ಪ್ರಸ್ತುತ 1,126 ಸದಸ್ಯರಿದ್ದು, ನಿತ್ಯ 200 ಮಂದಿ ನೇಯ್ಗೆ ಮಾಡುತ್ತಾರೆ. ಒಬ್ಬರು ದಿನಕ್ಕೆ ಎರಡು ಸೀರೆಗಳನ್ನು ನೇಯಬಹುದು; ನೇಯುವವರಲ್ಲಿ ಶೇ 75 ಮಹಿಳೆಯರು.* ಜಿಐ ಟ್ಯಾಗ್ ಪಡೆಯಲು 2019ರಿಂದ ಆರಂಭವಾದ ಪ್ರಯತ್ನಕ್ಕೆ 2025ರ ಮಾರ್ಚ್ನಲ್ಲಿ ಯಶಸ್ಸು ದೊರೆಯಿತು. ಇದರಿಂದ ಮಾರುಕಟ್ಟೆ ವಿಸ್ತಾರವಾಗುವ ನಿರೀಕ್ಷೆಯಿದೆ. ಆದರೆ ವಿದ್ಯುತ್ ಮಗ್ಗಗಳಲ್ಲಿ ನಕಲು ಮಾದರಿಗಳು ತಯಾರಾಗಿ ಕಡಿಮೆ ದರದಲ್ಲಿ ಮಾರಾಟವಾಗುತ್ತಿರುವುದು ಕೈಮಗ್ಗಕ್ಕೆ ಧಕ್ಕೆಯಾಗಿದೆ.* ಗಜೇಂದ್ರಗಡ ಪಟ್ಟೆದಂಚು ಸೀರೆಯ ಬೆಲೆ ₹850. ಕರ್ನಾಟಕ ಸೇರಿದಂತೆ ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಇದರ ಬೇಡಿಕೆ ಇದೆ.