* ದಕ್ಷಿಣ ಭಾರತ ಚಿತ್ರರಂಗದ 67 ವರ್ಷ ವಯಸ್ಸಿನ ತೆಲಗು ಭಾಷೆಯ ಹಿರಿಯ ಹಾಸ್ಯನಟ ಬ್ರಹ್ಮಾನಂದ ಅವರು 'ಗಿನ್ನೆಸ್ ವರ್ಲ್ಡ್ ರೆಕಾರ್ಡ್' ಸೇರಿದ್ದಾರೆ. ಇವರ 36 ವರ್ಷಗಳ ವೃತ್ತಿ ಬದುಕಿನಲ್ಲಿ ತೆಲಗು, ಕನ್ನಡ, ತಮಿಳು ಸೇರಿದಂತೆ ಹಲವಾರು ಭಾಷೆಗಳಲ್ಲಿ 1 ಸಾವಿರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. * 1987ರಲ್ಲಿ 'ಆಹಾ ನಾ ಪಲ್ಲಟ' ಸಿನಿಮಾದಲ್ಲಿ ನಟನೆ ಮೂಲಕ ಚಿತ್ರರಂಗ ಪ್ರವೇಶಿಸಿ ಹಾಸ್ಯಪಾತ್ರಗಳಲ್ಲಿ ಜನಪ್ರಿಯರಾಗಿದ್ದ ಇವರು ಸಣ್ಣ ಪಾತ್ರವಾದರೂ ಹಾಸ್ಯನಟ ಬ್ರಹ್ಮಾನಂದ ಅವರ ಸಂಭಾವನೆ 1 ಕೋಟಿ ರೂ ಪಡೆಯುತ್ತಾರೆ. * 2009 ರಲ್ಲಿ ಬ್ರಹ್ಮನಂದಂ ರವರಿಗೆ 'ಪದ್ಧಶ್ರೀ' ಗೌರವ ಸಂದಿದೆ ಹಾಗೂ 6 ಬಾರಿ 'ನಂದಿ ಪ್ರಶಸ್ತಿ', ಒಮ್ಮೆ 'ಫಿಲಂಫೇರ್ -ದಕ್ಷಿಣ ಪ್ರಶಸ್ತಿ' ಮತ್ತು 6 ಬಾರಿ 'ಸಿನಿಮಾ' ಪ್ರಶಸ್ತಿ, ಗೌರವ ಡಾಕ್ಟರೇಟ್ ಪಡೆದಿದ್ದಾರೆ. * ಸ್ವಾಮಿ ವಿವೇಕಾನಂದ, ಜಿಡ್ಡು ಕೃಷ್ಣಮೂರ್ತಿ ಅವರ ಬೋಧನೆ ಓದುತ್ತಾ, ಚಿತ್ರನಟನೆ ಮುಂದುವರಿಸಿರುವ ಬ್ರಹ್ಮಾನಂದ ಅವರ ಹೊಸಚಿತ್ರ 'ಗುಂಟೂರು ಖಾರಂ' ಸದ್ಯದಲ್ಲೇ ತೆರೆಗೆ ಬರಲಿದೆ.