* ಇತ್ತೀಚಿನ ಬಿಡುಗಡೆಯಾದ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಪಂಚದಾದ್ಯಂತ 2024 ನೇ ಸಾಲಿನ ಅಂತಿಮ ಆವೃತ್ತಿ ಪುಸ್ತಕ ಬಿಡುಗಡೆಯಾಗಿದ್ದು,  2,638 ಸಾಧನೆ/ದಾಖಲೆಗಳನ್ನು ಪಟ್ಟಿ ಮಾಡಲಾಗಿದ್ದು, ಅತಿ ಹೆಚ್ಚು ಮಳೆ ಬೀಳುವ ಮೇಘಾಲಯದ ಚಿರಾಪುಂಜಿ ಸೇರಿದಂತೆ ಭಾರತದ 60 ಕ್ಕೂ ಹೆಚ್ಚು ದಾಖಲೆಗಳು ಈ ಪುಸ್ತಕದಲ್ಲಿ ಸ್ಥಾನ ಪಡೆದುಕೊಂಡಿವೆ.* ಗಿನ್ನಿಸ್‌ ದಾಖಲೆಯ ಪುಸ್ತಕವನ್ನು ಭಾರತದಲ್ಲಿ 'ಪೆಂಗ್ವಿನ್ ರಾಂಡಮ್ ಹೌಸ್' ಪ್ರಕಾಶನ ಪ್ರಕಟಿಸಿದ್ದು, ಈ ಪುಸ್ತಕ 9 ಅಧ್ಯಾಯಗಳನ್ನು ಒಳಗೊಂಡಿದೆ. ಪುಸ್ತಕದ ಮುಖಪುಟವನ್ನು ಪ್ರಶಸ್ತಿ ವಿಜೇತ ಕಲಾವಿದ ರಾಡ್‌ ಹಂಟ್' ಪ್ರಕಟಿಸಿದ್ದಾರೆ.* 1989-1991 ನಡುವಿನ ಅವಧಿಯಲ್ಲಿ ವಿಶ್ವ ಪರ್ಯಟನೆ ಮಾಡಿ, ಆರು ಖಂಡಗಳನ್ನು ಸುತ್ತು ಹಾಕಿದ ಭಾರತದ ದಂಪತಿ ಚೌಧರಿ ಮತ್ತು ಅವರ ಪತ್ನಿ ನೀನಾ ಚೌಧರಿಯವರೂ ಗಿನಿಸ್ ದಾಖಲೆ ಪುಸ್ತಕದ ಸಾಧಕರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. * ಯುನೆಸ್ಕೊದಲ್ಲಿ ಗುರುತಿಸಿರುವ 1,154 ಪಾರಂಪರಿಕ ತಾಣಗಳ ಪೈಕಿ ಆಗ್ರಾದಲ್ಲಿರುವ ತಾಜ್ ಮಹಲ್ 2022ರ ಮಾರ್ಚ್‌ನಲ್ಲಿ 1.4 ದಶಲಕ್ಷ ಹುಡುಕಾಟಗಳನ್ನು ಕಂಡಿದ್ದು, ಇದನ್ನೂ ಗಿನ್ನಿಸ್ ದಾಖಲೆಯ ಪುಸ್ತಕದಲ್ಲಿ ಸೇರಿಸಲಾಗಿದೆ.* ತಮಿಳುನಾಡಿನ ಜೆ. ಜೆಸ್ಸಿಕಾ (ಒಂದು ಪಾದದ ಮೇಲೆ ನಿಂತು ಒಂದು ನಿಮಿಷದಲ್ಲಿ 213 ಹುಲಾ ಹೂಪ್ ತಿರುಗಿಸಿದ ಸಾಧನೆ) ಮತ್ತು ರೂಪಾ ಗಣೇಶವ (1 ಗಂಟೆ, 15 ನಿಮಿಷ 5 ಸೆಕಿಂಗ್ ಜಾಲ ಮತ್ಸಕನ್ಯ ಯೋಗ ಭಂಗಿ ಪ್ರದರ್ಶನ) ಮಧ್ಯಪ್ರದೇಶದ ಆದಿಕ್ಕೆ ಪಚೋಲಿ ಮತ್ತು ಗಿನ್ನೆಸ್ ರಿಷಿ (ದೇಹದ ಮೇಲೆ 366ಕ್ಕೂ ಹೆಚ್ಚು ಧ್ವಜದ ಹಚ್ಚೆ ಹೊಂದಿರುವ ವ್ಯಕ್ತಿ) ಅವರ ಹೆಸರು ಗಿನ್ನಿಸ್ ದಾಖಲೆಯ ಪುಸ್ತಕದಲ್ಲಿ ಸ್ಥಾನ ಪಡೆದಿದೆ.* ಉದ್ಯಮಿ ಮುಕೇಶ್ ಅಂಬಾನಿಯವರ 27 ಅಂತಸ್ಸಿನ ಗಗನಚುಂಬಿ ನಿವಾಸ ವಿಶ್ವದ ಅತಿದೊಡ್ಡ, ಎತ್ತರದ ಮತ್ತು ಅತ್ಯಂತ ದುಬಾರಿ ಖಾಸಗಿ ನಿವಾಸವೆನಿಸಿಕೊಂಡಿವೆ.