* ಸಿಐಎಸ್ಎಫ್(ಕೇಂದ್ರ ಕೈಗಾರಿಕಾ ಭದ್ರತಾ ಪಡೆ)ಯ ಮಹಿಳಾ ಸಬ್ ಇನ್ಸ್ಪೆಕ್ಟರ್ ಗೀತಾ ಸಮೋಟಾ ಅವರು ಮೇ 19 ರಂದು (ಸೋಮವಾರ) ವಿಶ್ವದ ಅತ್ತ್ಯನ್ನತ ಶಿಖರ 8849 ಮೀಟರ್ ಮೌಂಟ್ ಎವರೆಸ್ಟ್ ಶಿಖರ ಏರಿದ ಮೊದಲ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.* ಗೀತಾ ಸಮೋಟಾ ಅವರ ಸಾಧನೆಯನ್ನು ಸಿಐಎಸ್ ಎಫ್ ಅಧಿಕಾರಿಗಳು, ಸಿಬ್ಬಂದಿ ವರ್ಗ ಸಂಭ್ರಮಿಸಿದ್ದಾರೆ. ಕೈಗಾರಿಕಾ ಭದ್ರತಾ ಪಡೆ ಮುಂದಿನ ವರ್ಷ ಮೌಂಟ್ ಎವರೆಸ್ಟ್ ಗೆ ಪ್ರತ್ಯೇಕ ತಂಡವನ್ನೇ ಕಳುಹಿಸಲು ನಿರ್ಧರಿಸಿದ್ದು, ಇದಕ್ಕೂ ಮುನ್ನವೇ ತಮ್ಮದೇ ಪಡೆಯ ಮಹಿಳಾ ಸಬ್ ಸಬ್ ಇನ್ಸ್ಪೆಕ್ಟರ್ ಈ ಸಾಧನೆ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ಹರ್ಷ ವ್ಯಕ್ತಪಡಿಸಿದರು.* 35 ವರ್ಷದ ಸಬ್ ಇನ್ಸ್ಪೆಕ್ಟರ್ 2011 ರಲ್ಲಿ ಅರೆಸೈನಿಕ ಪಡೆಗೆ ಸೇರಿದರು ಮತ್ತು ಪ್ರಸ್ತುತ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ನ ಉದಯಪುರ ವಿಮಾನ ನಿಲ್ದಾಣ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.* ತಮ್ಮ ಶ್ರೇಷ್ಠ ಸಾಧನೆಗಳಿಗಾಗಿ ಗೀತಾ ಹಲವು ಪ್ರಮುಖ ಗೌರವಗಳನ್ನೂ ಸ್ವೀಕರಿಸಿದ್ದಾರೆ. ಇವುಗಳ ಪೈಕಿ, ದೆಹಲಿ ಮಹಿಳಾ ಆಯೋಗದಿಂದ ಅಂತಾರಾಷ್ಟ್ರೀಯ ಮಹಿಳಾ ದಿನ ಪ್ರಶಸ್ತಿ, 2023, ಕೇಂದ್ರ ವಿಮಾನಯಾನ ಸಚಿವಾಲಯದಿಂದ ಗಿವಿಂಗ್ ವಿಂಗ್ಸ್ ಟು ಡ್ರೀಮ್ಸ್, 2023 ಪ್ರಶಸ್ತಿ ಪಡೆದಿದ್ದಾರೆ.* ಗೀತಾ ಸಮೋಟಾ ಸಾಧನೆಯ 'ಶಿಖರ':- 2019ರಲ್ಲಿ ಉತ್ತರಾಖಂಡದ ಮೌಂಟ್ ಸತೋಪಂತ್ (7,075 ಮೀಟರ್) ಮತ್ತು ನೇಪಾಳದ ಮೌಂಟ್ ಲೋಬುಚೆ (6,119 ಮೀಟರ್) ಏರಿದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF)ಯ ಮೊದಲ ಮಹಿಳೆ.- 2021 ಮತ್ತು 2022ರ ನಡುವೆ, ಆಸ್ಟ್ರೇಲಿಯಾದ ಮೌಂಟ್ ಕೊಸ್ಸಿಯುಸ್ಕೊ (2,228 ಮೀ), ರಷ್ಯಾದ ಮೌಂಟ್ ಎಲ್ಬ್ರಸ್ (5,642 ಮೀ), ತಾಂಜಾನಿಯಾದಲ್ಲಿ ಮೌಂಟ್ ಕಿಲಿಮಂಜಾರೊ (5,895 ಮೀ) ಮತ್ತು ಅರ್ಜೆಂಟೀನಾದಲ್ಲಿ ಮೌಂಟ್ ಅಕಾನ್ಕಾಗುವಾ (6,961 ಮೀ) ಹತ್ತಿದ ಕೀರ್ತಿ.- ಕೇವಲ ಆರು ತಿಂಗಳು ಮತ್ತು 27 ದಿನಗಳಲ್ಲೇ ಜಗತ್ತಿನ ಪ್ರಮುಖ 'ಏಳು ಶಿಖರ'ಗಳ ಪೈಕಿ ನಾಲ್ಕನ್ನು ಅತ್ಯಂತ ವೇಗವಾಗಿ ಹತ್ತಿದ ಭಾರತೀಯ ಮಹಿಳೆ.- ಲಡಾಖ್ನ ರುಪ್ಶು ಪ್ರದೇಶದಲ್ಲಿ ಕೇವಲ ಮೂರೇ ದಿನಗಳಲ್ಲಿ ಐದು ಶಿಖರಗಳನ್ನು ಏರಿದ ಮೊದಲ ಮತ್ತು ವೇಗದ ಮಹಿಳೆ ಎಂಬ ಹಿರಿಮೆ. ಇದರಲ್ಲಿ 6,000 ಮೀಟರ್ಗಿಂತ ಹೆಚ್ಚಿನ ಮೂರು ಮತ್ತು 5,000 ಮೀಟರ್ಗಿಂತ ಹೆಚ್ಚಿನ ಎರಡು ಶಿಖರಗಳಿವೆ.