* ಗಗನಯಾನಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಐತಿಹಾಸಿಕ ಭೇಟಿ ನೀಡಿ ಭಾನುವಾರ ಭಾರತಕ್ಕೆ ಮರಳುತ್ತಿದ್ದಾರೆ.* ಅವರು ನಾಸಾ ಮತ್ತು ಇಸ್ರೊ ಸಹಯೋಗದ ಆಕ್ಸಿಯಂ–4 ಯೋಜನೆಯ ಭಾಗವಾಗಿ ಇತರ ಮೂವರು ಗಗನಯಾನಿಗಳೊಂದಿಗೆ ಮಾನವ ಸಹಿತ ಬಾಹ್ಯಾಕಾಶ ಯಾನದಲ್ಲಿ ಪಾಲ್ಗೊಂಡಿದ್ದರು.* ಕಳೆದ ಒಂದು ವರ್ಷದಿಂದ ಅಮೆರಿಕದಲ್ಲಿ ತರಬೇತಿ ಪಡೆದಿದ್ದ ಶುಭಾಂಶು, ಮೊದಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ನಂತರ ತಮ್ಮ ಊರು ಲಖನೌಗೆ ತೆರಳಲಿದ್ದಾರೆ. * ಆಗಸ್ಟ್ 22–23 ರಂದು ನಡೆಯಲಿರುವ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಕಾರ್ಯಕ್ರಮದಲ್ಲಿಯೂ ಭಾಗವಹಿಸಲಿದ್ದಾರೆ. ಮರಳುವ ಮುನ್ನ ಶುಕ್ಲಾ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಭಾವನೆ ಹಂಚಿಕೊಂಡು, ಅಮೆರಿಕದ ಅದ್ಭುತ ತಂಡವನ್ನು ಬಿಟ್ಟು ಹೊರಟ ದುಃಖ ಮತ್ತು ಸ್ವದೇಶಕ್ಕೆ ಮರಳುವ ಉತ್ಸಾಹ ಎರಡೂ ಮಿಶ್ರ ಭಾವ ಮೂಡಿಸಿದೆ ಎಂದು ಹೇಳಿದ್ದಾರೆ. ಅವರು “ಜೀವನ ಎಂದರೆ ಬದಲಾವಣೆ” ಎಂಬ ತಮ್ಮ ಕಮಾಂಡರ್ ಪೆಗ್ಗಿ ವಿಟ್ಸನ್ ಅವರ ಮಾತು ನೆನಪಿಸಿಕೊಂಡಿದ್ದಾರೆ.* ಜೂನ್ 25 ರಂದು ಆರಂಭವಾದ ಈ 18 ದಿನಗಳ ಬಾಹ್ಯಾಕಾಶ ಮಿಷನ್ನಲ್ಲಿ ಪೆಗ್ಗಿ ವಿಟ್ಸನ್, ಪೋಲೆಂಡ್ನ ಸ್ಲಾವೊಸ್ಜ್ ಉಜ್ನಾನ್ಸ್ಕಿ ಹಾಗೂ ಹಂಗೇರಿಯ ಟಿಬೋರ್ ಕಾಪು ಅವರೊಂದಿಗೆ ಅವರು ಭಾಗವಹಿಸಿದ್ದರು.