* ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಹೊತ್ತೊಯ್ಯಲು 'ಬೋಯಿಂಗ್ ಸ್ಟಾರ್‌ಲೈನರ್' ಬಾಹ್ಯಾಕಾಶ ನೌಕೆ ಸಜ್ಜಾಗಿದೆ ಎನ್ನಲಾಗಿತ್ತು.* ಆದರೆ ಅಂತರಿಕ್ಷ ಯಾನ ಕೈಗೊಳ್ಳಬೇಕಿದ್ದ ತನ್ನ ಪ್ರಥಮ ಗಗನಯಾನಿ ಸಹಿತ ವ್ಯೋಮ ನೌಕೆಯ ಉಡಾವಣೆಯನ್ನು ರಾಕೇಟ್‌ನಲ್ಲಿನ ವಾಲ್ವ್ ವೊಂದರಲ್ಲಿ ದೋಷ ಕಂಡು ಬಂದ ಕಾರಣ ಬೋಯಿಂಗ್‌ ಸಂಸ್ಥೆ ಉಡಾವಣೆಯನ್ನು ಮುಂದೂಡಲಾಯಿತು.* ಉಡಾವಣೆಗೆ ನಿಗದಿತ ಎರಡು ಗಂಟೆಗಳ ಮುನ್ನ ಕ್ಷಣಗಣನೆಯನ್ನು ಸ್ಥಗಿತಗೊಳಿಸಲಾಯಿತು ಎಂದು ಯುನೈಟೆಡ್‌ ಲಾಂಚ್‌ ಅಲಯೆನ್ಸ್ ಎಂಜಿನಿಯರ್‌ ಡಿಲ್ಲೋನ್‌ ರೈಸ್‌‍ ಅವರು ತಿಳಿಸಿದರು.* ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಥಮ ಬಾರಿಗೆ 2019ರಲ್ಲಿ ನೌಕೆಯನ್ನು ತಲುಪಿಸಲು ಬೋಯಿಂಗ್‌ ಮರು ಯತ್ನ ಮಾಡಬೇಕಾಯಿತು. ಆಗ ಕಂಪನಿ ಚ್ಯೂಟ್‌ಸಮಸ್ಯೆ ಮತ್ತು ಹೊತ್ತಿ ಉರಿಯುವ ಟೇಪ್‌ ಸಮಸ್ಯೆಯನ್ನು ಎದುರಿಸಿತ್ತು.* ಫ್ಲಾರಿಡಾದ ಕೆನಡಿ ಸ್ಪೇಸ್ ಸೆಂಟರ್‌ನಿಂದ ಭಾರತೀಯ ಕಾಲಮಾನದ ಪ್ರಕಾರ ಮಂಗಳವಾರ ಬೆಳಿಗ್ಗೆ 8.04ಕ್ಕೆ ಈ ಗಗನನೌಕೆಯು ಉಡಾವಣೆ ಆಗಬೇಕಿತ್ತು. ಸುನಿತಾ ವಿಲಿಯಮ್ಸ್ ಮತ್ತೊಬ್ಬ ಗಗನಯಾತ್ರಿ ರ್ಬೆ ವಿಲೋರ್ ಅವರು ಗಗನನೌಕೆಯಲ್ಲಿ ಕುಳಿತಿದ್ದರು.* ಗಗನನೌಕೆ ಉಡಾವಣೆಯಾಗಲು 45 ನಿಮಿಷಗಳಷ್ಟೇ ಬಾಕಿ ಇದ್ದು, 'ಆಮ್ಲಜನಕ ಬಿಡುಗಡೆ ಸಮಪರ್ಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ 'ನಾಸಾ' ಘೋಷಿಸಿತ್ತು.