* ಉತ್ತರ ಕರ್ನಾಟಕದ ಕೈಮಗ್ಗ ಪರಂಪರೆಯ ಆಕರ್ಷಣೆಯಾಗಿರುವ ಪಟ್ಟೇದ ಅಂಚು ಸೀರೆಗೆ ಭೌಗೋಳಿಕ ಮಾನ್ಯತೆ (ಜಿಐ) ಲಭಿಸಿದೆ.* ಬೆಂಗಳೂರಿನ ರಾಮಯ್ಯ ಕಾನೂನು ಕಾಲೇಜು ಬೌದ್ಧಿಕ ಆಸ್ತಿ ಹಕ್ಕು ಕೇಂದ್ರ (ಆರ್ಸಿಐಪಿಆರ್) ಮತ್ತು ಜಿಐ ಮಾನ್ಯತೆಯ ನೋಡಲ್ ಏಜೆನ್ಸಿಯಾದ ವಿಶ್ವೇಶ್ವರಯ್ಯ ಉತ್ತೇಜನ ಕೇಂದ್ರ (ವಿಟಿಪಿಸಿ) ಸಹಯೋಗದಲ್ಲಿ ಜಿಐ ನೋಂದಣಿಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಲಾಗಿದೆ.* ಕಠಿಣವಾದ ಜಿಐ ನೋಂದಣಿ ಪ್ರಕ್ರಿಯೆಯನ್ನು ಪೂರೈಸಲು ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಅಗತ್ಯ ಮಾರ್ಗದರ್ಶನ ನೀಡಿದೆ.* ಗದಗ ಜಿಲ್ಲೆಯ ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕ ಸಂಘಕ್ಕೆ ಜಿಐ ಮಾನ್ಯತೆಯನ್ನು ನೀಡಲಾಗಿದೆ. ಪಟ್ಟೇದ ಅಂಚು ಸೀರೆಯು ಗಾಢವಾದ ಬಣ್ಣ ಮತ್ತು ವಿಶಿಷ್ಟವಾದ ಅಂಚು ಮೂಲಕ ಖ್ಯಾತಿ ಗಳಿಸಿದೆ.