* ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರು ಗಡಿ ಸಮಸ್ಯೆಗಳ ಕುರಿತ ಮಾತುಕತೆಗೆ ಭಾರತಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ದೆಹಲಿಯಲ್ಲಿ ಅವರನ್ನು ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ಗೌರಂಗಲಾಲ್ ದಾಸ್ ಸ್ವಾಗತಿಸಿದರು.* ವಾಂಗ್ ಯಿ ಮತ್ತು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಬಾಲ್ ಗಡಿ ಸಮಸ್ಯೆಗಳ ಕುರಿತ ವಿಶೇಷ ಪ್ರತಿನಿಧಿಗಳಾಗಿದ್ದು, ಮಂಗಳವಾರ 24ನೇ ಸುತ್ತಿನ ಮಾತುಕತೆ ನಡೆಸಲಿದ್ದಾರೆ.* 2020ರ ಗ್ವಾಲನ್ ಘರ್ಷಣೆಯ ನಂತರ ಉಭಯ ರಾಷ್ಟ್ರಗಳ ಬಾಂಧವ್ಯವನ್ನು ಬಲಪಡಿಸುವ ಉದ್ದೇಶದಿಂದ ಈ ಚರ್ಚೆಗಳು ನಡೆಯುತ್ತಿವೆ.* ಮಂಗಳವಾರ(ಆಗಸ್ಟ್ 19) ಸಂಜೆ ವಾಂಗ್ ಯಿ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಭೇಟಿಯಾಗಲಿದ್ದಾರೆ. ಈ ಮಾತುಕತೆಗಳು ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಗೆ ಮುನ್ನ ನಡೆಯುತ್ತಿರುವುದರಿಂದ ಮಹತ್ವ ಪಡೆದಿವೆ.* ಇದೇ ವಾರ ವಾಂಗ್ ಯಿ ಇಸ್ಲಾಮಾಬಾದ್ನಲ್ಲೂ ಎರಡು ದಿನಗಳ ಪ್ರವಾಸ ಕೈಗೊಂಡು ಪಾಕಿಸ್ತಾನದ ನಾಗರಿಕ ಮತ್ತು ಸೇನಾ ನಾಯಕತ್ವದೊಂದಿಗೆ ದ್ವಿಪಕ್ಷೀಯ ಹಾಗೂ ಪ್ರಾದೇಶಿಕ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ.