* ವಿದ್ವಾಂಸೆ ಮತ್ತು ಸಿದ್ಧಾಂತಿ ಗಾಯತ್ರಿ ಚಕ್ರವರ್ತಿ ಸ್ಪಿವಾಕ್ ಅವರಿಗೆ "2025ರ ಹೋಲ್ಬರ್ಗ್ ಪ್ರಶಸ್ತಿ"ಯನ್ನು ನೀಡಲಾಗಿದೆ.* ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯಂತ ಪ್ರತಿಷ್ಠಿತ ಅಂತರರಾಷ್ಟ್ರೀಯ ಪ್ರಶಸ್ತಿಗಳಲ್ಲಿ ಒಂದಾದ ಹೋಲ್ಬರ್ಗ್ ಪ್ರಶಸ್ತಿಯನ್ನು ಮಾನವಿಕತೆ, ಸಮಾಜಶಾಸ್ತ್ರ, ಕಾನೂನು ಮತ್ತು ದೇವತಾಶಾಸ್ತ್ರ ಕ್ಷೇತ್ರಗಳಲ್ಲಿ ಅಗ್ರಗಣ್ಯ ಸಂಶೋಧಕರಿಗೆ ನೀಡಲಾಗುವ ಈ ಪ್ರಶಸ್ತಿಯು $540,000 ನಗದು ಬಹುಮಾನವನ್ನು ಒಳಗೊಂಡಿದೆ.* ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಮಾನವಿಕ ವಿಭಾಗದ ಪ್ರಾಧ್ಯಾಪಕರಾಗಿರುವ ಸ್ಪಿವಾಕ್, ವಸಾಹತುಶಾಹಿ ನಂತರದ ಅಧ್ಯಯನಗಳ ಪ್ರಮುಖ ವಿದ್ವಾಂಸೆಯಾಗಿದ್ದಾರೆ. ಅವರ ಪ್ರಬಂಧ "ಸಬಾಲ್ಟರ್ನ್ ಮಾತನಾಡಬಹುದೇ?" (1988) ನೈತಿಕ ಮತ್ತು ಸಾಂಸ್ಕೃತಿಕ ಸಂಶೋಧನೆಗೆ ಮಹತ್ವದ ಕೊಡುಗೆ ನೀಡಿದೆ.* 1943, ಫೆ.24ರಂದು ಕೋಲ್ಕತಾದಲ್ಲಿ ಜನಿಸಿದ್ದು, ಕೋಲ್ಕತಾ ವಿವಿ ಮತ್ತು ಕಾರ್ನೆಲ್ ವಿವಿಯ ಹಳೆಯ ವಿದ್ಯಾರ್ಥಿನಿಯಾಗಿರುವ ಸ್ಪಿವಾಕ್ ಪ್ರಸ್ತುತ ಕೊಲಂಬಿಯಾ ವಿವಿಯಲ್ಲಿ ಮಾನವ ಸಂಸ್ಕೃತಿ ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿದ್ದಾರೆ. ಅವರನ್ನು ಅತ್ಯಂತ ಪ್ರಭಾವಿ ಜಾಗತಿಕ ಬುದ್ಧಿಜೀವಿಗಳಲ್ಲಿ ಓರ್ವರೆಂದು ಪರಿಗಣಿಸಲಾಗಿದೆ.* ಒಂಭತ್ತು ಪುಸ್ತಕಗಳನ್ನು ಬರೆದಿರುವ ಸ್ಪಿವಾಕ್ ಇತರ ಹಲವಾರು ಕೃತಿಗಳನ್ನು ಸಂಪಾದಿಸಿದ್ದಾರೆ ಅಥವಾ ಅನುವಾದಿಸಿದ್ದಾರೆ. ಅವರ ಸಂಶೋಧನೆ 20ಕ್ಕೂ ಅಧಿಕ ಭಾಷೆಗಳಿಗೆ ಅನುವಾದಗೊಂಡಿದ್ದು,ಅವರು 50ಕ್ಕೂ ಅಧಿಕ ದೇಶಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ.* ಹೋಲ್ಬರ್ಗ್ ಪ್ರಶಸ್ತಿ ನೀಡುವ ಉಲ್ಲೇಖದಲ್ಲಿ ಅವರ ಈ ವಿಶಿಷ್ಟ ಕೊಡುಗೆಗಳನ್ನು ಪ್ರಶಂಸಿಸಲಾಗಿದೆ. ಸ್ಪಿವಾಕ್ ಜೂನ್ 5 ರಂದು ನಾರ್ವೆಯ ಬರ್ಗೆನ್ ವಿಶ್ವವಿದ್ಯಾಲಯದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.