* ಮಹಾತ್ಮ ಗಾಂಧಿ ಅವರ ಅಪರೂಪದ ತೈಲವರ್ಣಚಿತ್ರವು ಬಾನ್ಹಮ್ಸ್ ಹರಾಜಿನಲ್ಲಿ ₹1.75 ಕೋಟಿಗೆ (152,800 ಪೌಂಡ್) ಮಾರಾಟವಾಗಿದೆ. ಇದು ನಿಗದಿಪಡಿಸಿದ್ದ ₹57.55 ಲಕ್ಷದಿಂದ ₹80.59 ಲಕ್ಷದ ಅಂದಾಜಿಗಿಂತ ಮೂರು ಪಟ್ಟು ಹೆಚ್ಚು ಬೆಲೆಯಾಗಿದೆ.* ಈ ತೈಲವರ್ಣಚಿತ್ರವು ಹಿಂದೆ ಯಾವ ಹರಾಜಿಗೂ ಹೋಗಿರಲಿಲ್ಲ. ಆನ್ಲೈನ್ ಹರಾಜಿನಲ್ಲಿ ಮೊದಲಬಾರಿಗೆ ಇದನ್ನು ಪ್ರದರ್ಶಿಸಲಾಗಿತ್ತು. ಮಂಗಳವಾರ(ಜುಲೈ 15) ಮುಕ್ತಾಯಗೊಂಡ ಹರಾಜಿನಲ್ಲಿ ಅಗ್ರಸ್ಥಾನ ಪಡೆದಿತು.* ಈ ಚಿತ್ರವನ್ನು 1931ರಲ್ಲಿ ಲಂಡನ್ನಲ್ಲಿ ನಡೆದ ಎರಡನೇ ದುಂಡು ಮೇಜಿನ ಸಮ್ಮೇಳನದ ವೇಳೆ ಕಲಾವಿದ ಕ್ಲೇರ್ ಲೈಟನ್ ಗಾಂಧಿಜಿಯವರನ್ನು ಭೇಟಿಯಾದಾಗ ರಚಿಸಿದ್ದರು.* ಬಾನ್ಹಮ್ಸ್ ಮಾರಾಟ ವಿಭಾಗದ ಮುಖ್ಯಸ್ಥ ರಿಯಾನಾನ್ ಡೆಮೆರಿ ಅವರ ಪ್ರಕಾರ, ಇದು ಗಾಂಧೀಜಿಯವರ ಏಕೈಕ ತೈಲವರ್ಣಚಿತ್ರವಾಗಿರಬಹುದು ಎಂದು ಭಾವಿಸಲಾಗಿದೆ.