* ಹಮಾಸ್ ಜತೆಗಿನ ಗಾಝಾ ಯುದ್ಧ ವಿರಾಮ ಒಪ್ಪಂದ ಪೂರ್ಣಗೊಂಡಿಲ್ಲ. ಅಂತಿಮ ವಿವರಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.* ಗಾಝಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿಯನ್ನು ತೀವ್ರಗೊಳಿಸಿದೆ ಎಂದು ಪ್ಯಾಲೆಸ್ತೀನ್ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.* ಅಮೆರಿಕ ಮತ್ತು ಕತಾರ್ ಘೋಷಿಸಿದ ಇಸ್ರೇಲ್-ಹಮಾಸ್ ಯುದ್ಧ ವಿರಾಮ ಒಪ್ಪಂದದ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆ ಸಂಭವಿಸಿದೆ.* 2023ರ ಅಕ್ಟೋಬರ್ 7ರಂದು ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸುವ ಮೂಲಕ ಸಮರ ಶುರುವಾಯಿತು.* ಗಾಝಾ ಪಟ್ಟಿಯಲ್ಲಿ 46 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ವರದಿಗಳು ಹೇಳಿವೆ. 12 ಸಾವಿರ ಯೋಧರು ಈ ಸಮರದಲ್ಲಿ ಅಸುನೀಗಿದ್ದು, ಒಂದು ಲಕ್ಷಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ.* ಗಾಝಾದಲ್ಲಿ ಜನವರಿ 19ರಿಂದ ಕದನ ವಿರಾಮ ಪ್ರಾರಂಭವಾಗಲಿದ್ದು, ಪ್ರಥಮ ಹಂತದಲ್ಲಿ ಇಸ್ರೇಲ್ನ 33 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗುತ್ತದೆ. ಇಸ್ರೇಲಿ ಪಡೆಗಳು ಕೆಲವು ಪ್ರದೇಶಗಳಿಂದ ಹಿಂದೆ ಸರಿಯಲಿದ್ದು, ಫೆಲೆಸ್ತೀನೀಯರು ತಮ್ಮ ಮನೆಗಳಿಗೆ ಮರಳಲು ಸಾಧ್ಯವಾಗುತ್ತದೆ. ಯುದ್ಧ ಸಂತ್ರಸ್ತರಿಗೆ ಮಾನವೀಯ ನೆರವಿನ ಪ್ರಮಾಣವೂ ಹೆಚ್ಚಲಿದೆ.