* ಮುಂದಿನ 48 ಗಂಟೆಗಳಲ್ಲಿ ಗಾಜಾಗೆ ಹೆಚ್ಚಿನ ನೆರವು ತಲುಪದಿದ್ದರೆ ಅಲ್ಲಿ 14 ಸಾವಿರ ಶಿಶುಗಳು ಸಾವಿನ ದವಡಿಯಲ್ಲಿ ಸಿಲುಕಬಹುದು ಎಂದು ವಿಶ್ವಸಂಸ್ಥೆ ಮಂಗಳವಾರ (ಮೇ 20) ಎಚ್ಚರಿಸಿದೆ.* ಇಸ್ರೇಲ್ ಗಾಜಾವನ್ನು ಸಂಪೂರ್ಣ ನಿರ್ಬಂಧಕ್ಕೆ ಒಳಪಡಿಸಿದ್ದು, ಪ್ಯಾಲೆಸ್ತೀನ್ನ ಕೆಲವು ಭಾಗಗಳಿಗೆ ಮಾತ್ರ ಸಹಾಯ ತಲುಪಲು ಅವಕಾಶ ನೀಡಲಾಗಿದೆ.* ಅಮೆರಿಕಾ, ಕೆನಡಾ, ಫ್ರಾನ್ಸ್ ಮತ್ತು ಇಂಗ್ಲೆಂಡ್ನಂತಹ ಮಿತ್ರ ರಾಷ್ಟ್ರಗಳ ಒತ್ತಡದ ನಂತರ ಇಸ್ರೇಲ್ ಈ ನಿರ್ಧಾರವನ್ನು ತೆಗೆದುಕೊಂಡಿದೆ.* ಶಿಶುಗಳಿಗೆ ಅಗತ್ಯವಾದ ಆಹಾರ ಸೇರಿದಂತೆ ಮಾನವೀಯ ನೆರವು ಹೊತ್ತ ಐದು ಟ್ರಕ್ಗಳು ಸೋಮವಾರ ಗಾಜಾಗೆ ತಲುಪಿದರೂ, ಈ ಸಹಾಯ ಸಾಕಾಗದು. ಸೂಕ್ತ ಸಮಯದಲ್ಲಿ ನೆರವು ದೊರಕದಿದ್ದರೆ ಮುಂದಿನ 48 ಗಂಟೆಗಳಲ್ಲಿ 14 ಸಾವಿರ ಶಿಶುಗಳು ಜೀವಿತ ಕಳೆದುಕೊಳ್ಳಬಹುದು.* ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ತಾಯಂದಿರಿಗೆ ತಮ್ಮ ಮಕ್ಕಳಿಗೆ ಆಹಾರ ನೀಡುವ ಶಕ್ತಿ ಇಲ್ಲ. ಈ ಕುಟುಂಬಗಳಿಗೆ ಆಹಾರ ತಲುಪಿಸಲು ನಾವು ಎಲ್ಲ ಅಪಾಯಗಳನ್ನು ಎದುರಿಸುತ್ತೇವೆ ಎಂದು ವಿಶ್ವಸಂಸ್ಥೆಯ ಮಾನವೀಯ ಮುಖ್ಯಸ್ಥ ಟಾಮ್ ಫ್ಲೆಚರ್ ಹೇಳಿದ್ದಾರೆ.* ಶಿಶು ಆಹಾರದ ಜೊತೆಗೆ ಹೆಚ್ಚಿನ ನೆರವುಗಳಿರುವ ನೂರು ಟ್ರಕ್ಗಳನ್ನು ಗಾಜಾಗೆ ಕಳುಹಿಸುವ ಪ್ರಯತ್ನವನ್ನು ವಿಶ್ವಸಂಸ್ಥೆ ಮಾಡುತ್ತಿದೆ ಎಂಬುದನ್ನು ಅವರು ಹೇಳಿದ್ದಾರೆ.