Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
2026ರ ಮೊದಲ ಚಂದ್ರಗ್ರಹಣ: ಇಂದು ಅಪರೂಪದ 'ಗ್ರಸ್ತೋದಯ' ಚಂದ್ರಗ್ರಹಣ!
Authored by:
Akshata Halli
Date:
3 ಮಾರ್ಚ್ 2026
➤
ಖಗೋಳ ಆಸಕ್ತರಿಗೆ ಹಾಗೂ ಸಾರ್ವಜನಿಕರಿಗೆ ಇಂದು (ಮಾರ್ಚ್ 3, 2026) ಒಂದು ಅಪರೂಪದ ದಿನ. 2026ನೇ ಸಾಲಿನ ಮೊದಲ ಚಂದ್ರಗ್ರಹಣವು ಇಂದು ಸಂಭವಿಸಲಿದ್ದು, ಇದು 'ಗ್ರಸ್ತೋದಯ' ಚಂದ್ರಗ್ರಹಣ ಎಂಬ ವಿಶೇಷತೆಗೆ ಸಾಕ್ಷಿಯಾಗಲಿದೆ. ಫಾಲ್ಗುಣ ಮಾಸದ ಹುಣ್ಣಿಮೆಯಾದ ಇಂದು ಮಧ್ಯಾಹ್ನ 3:23ಕ್ಕೆ ಆರಂಭವಾಗಿ ಸಂಜೆ 6:47ಕ್ಕೆ ಮುಕ್ತಾಯಗೊಳ್ಳಲಿರುವ ಈ ಚಂದ್ರಗ್ರಹಣವು ಒಟ್ಟು 3 ಗಂಟೆ 24 ನಿಮಿಷಗಳ ಕಾಲ ಸಂಭವಿಸಲಿದ್ದು, ಸಂಜೆ 5:04ಕ್ಕೆ ಮಧ್ಯಕಾಲವಿರಲಿದೆ.
➤
ಕರ್ನಾಟಕ:
ಭಾರತದ ವಿವಿಧ ಭಾಗಗಳಲ್ಲಿ ಈ ಗ್ರಹಣವು ವಿಭಿನ್ನ ಅವಧಿಗೆ ಗೋಚರಿಸಲಿದೆ. ಭಾರತದಲ್ಲಿ ಗರಿಷ್ಠ 52 ನಿಮಿಷಗಳ ಕಾಲ ಗ್ರಹಣ ಕಂಡುಬಂದರೆ,
ನಮ್ಮ ಕರ್ನಾಟಕದಲ್ಲಿ ಸಂಜೆ 6:28 ರಿಂದ 6:48 ರವರೆಗೆ ಮಾತ್ರ
(ಕೇವಲ 20 ನಿಮಿಷಗಳು) ಭಾಗಶಃ ಚಂದ್ರಗ್ರಹಣ ಗೋಚರಿಸಲಿದೆ.
➤
'ಗ್ರಸ್ತೋದಯ' ಚಂದ್ರಗ್ರಹಣ:
ಸಾಮಾನ್ಯವಾಗಿ ಚಂದ್ರ ಉದಯಿಸಿದ ನಂತರ ಗ್ರಹಣ ಹಿಡಿಯುವುದು ವಾಡಿಕೆ. ಆದರೆ, ಇಂದು ಚಂದ್ರನು ಪೂರ್ವ ದಿಕ್ಕಿನಲ್ಲಿ ಉದಯಿಸುವ ಮುನ್ನವೇ ಗ್ರಹಣಕ್ಕೊಳಗಾಗಿರುತ್ತಾನೆ. ಅಂದರೆ
ಗ್ರಹಣ ಹಿಡಿದ ಚಂದ್ರನೇ ಉದಯಿಸುವುದರಿಂದ
ಇದನ್ನು ಶಾಸ್ತ್ರಗಳಲ್ಲಿ
'ಗ್ರಸ್ತೋದಯ ಚಂದ್ರಗ್ರಹಣ'
ಎಂದು ಕರೆಯಲಾಗುತ್ತದೆ. ಇದನ್ನು 'ರಕ್ತ ಚಂದ್ರಗ್ರಹಣ' (Blood Moon) ಎಂದೂ ಕೂಡ ಬಣ್ಣಿಸಲಾಗುತ್ತಿದೆ.
➤
ಗ್ರಹಣದ ಹಿನ್ನೆಲೆಯಲ್ಲಿ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ಹಾಗೂ ತಿರುಪತಿಯಂತಹ ಪ್ರಮುಖ ದೇವಾಲಯಗಳ ದರ್ಶನ ಮತ್ತು ಶುಭ ಕಾರ್ಯಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಗ್ರಹಣ ಮುಕ್ತಾಯದ ನಂತರ ಶುದ್ಧೀಕರಣ ಕಾರ್ಯಗಳು ನಡೆದು ರಾತ್ರಿ 7:30ರಿಂದ ಭಕ್ತರಿಗೆ ಪುನಃ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
Take Quiz
Loading...