* 2025ರ ಫೈಡೆ (FIDE) ಮಹಿಳಾ ಚೆಸ್ ವಿಶ್ವಕಪ್ ನಲ್ಲಿ ಭಾರತ ಐತಿಹಾಸಿಕ ಸಾಧನೆ ನಡೆಸಿದೆ. ಜಾರ್ಜಿಯಾದ ಬಟುಮಿಯಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕೊನೇರು ಹಂಪಿ ಮತ್ತು ದಿವ್ಯಾ ದೇಶಮುಖ್ ಇಬ್ಬರೂ ವಿಜೇತರಾಗಿ ಫೈನಲ್ ಪ್ರವೇಶಿಸಿದ್ದಾರೆ.* ಚೀನಾದ ಲೀ ಟಿಂಗ್ಜಿಯನ್ನು 5–3 ಅಂತರದ ಟೈಬ್ರೇಕ್ನಲ್ಲಿ ಸೋಲಿಸಿದ ಹಂಪಿ ಶ್ರೇಷ್ಠ ಆಟ ತೋರಿದರು. ಇನ್ನೊಂದೆಡೆ, ದಿವ್ಯಾ ದೇಶಮುಖ್ ಅವರು ಚೀನಾದ ವಿಶ್ವ ಚಾಂಪಿಯನ್ ತಾನ್ ಝೊಂಗಿಯನ್ನು ಪರಾಭವಗೊಳಿಸಿ ಮೊದಲ ಬಾರಿಗೆ ಫೈನಲ್ ತಲುಪುವ ಸಾಧನೆ ಮಾಡಿದರು.* ಶನಿವಾರ(ಜುಲೈ 26) ನಡೆಯುವ ಫೈನಲ್ ಪಂದ್ಯದಲ್ಲಿ 38 ವರ್ಷದ ಹಂಪಿ ಮತ್ತು 19 ವರ್ಷದ ದಿವ್ಯಾ ದೇಶಮುಖ್ ಇಬ್ಬರು ಭಾರತೀಯರು ಮುಖಾಮುಖಿಯಾಗಲಿದ್ದು, ದೇಶಕ್ಕೆ ವಿಶ್ವಕಪ್ ಖಚಿತವಾಗಿದೆ. ಇದು ಭಾರತೀಯ ಮಹಿಳಾ ಚೆಸ್ನ ಇತಿಹಾಸದಲ್ಲಿ ಮೈಲಿಗಲ್ಲು ಆಗಲಿದೆ.* ಹಂಪಿ ಹಾಗೂ ದಿವ್ಯಾ ಇಬ್ಬರೂ ಮುಂದಿನ ವರ್ಷ ನಡೆಯುವ ಕ್ಯಾಂಡಿಡೇಟ್ಸ್ ಟೂರ್ನಿಗೆ ಅರ್ಹರಾಗಿದ್ದಾರೆ. ವಿಶ್ವ ಚಾಂಪಿಯನ್ಗಾಗಿನ ಸವಾಲು ಈ ಟೂರ್ನಿಯಲ್ಲಿ ನಿರ್ಧಾರವಾಗಲಿದೆ.* ಚೀನಾದ ತಾನ್ ಝೊಂಗ್ವಿ ಮತ್ತು ಟಿಂಗ್ಜೀ ಲೀ ನಡುವಿನ ಮೂರನೇ ಸ್ಥಾನಕ್ಕಾಗಿ ಪಂದ್ಯ ನಡೆಯಲಿದೆ. ಇದರ ವಿಜೇತೆ ಕೂಡ ಕ್ಯಾಂಡಿಡೇಟ್ಸ್ ಟೂರ್ನಿಗೆ ಅರ್ಹವಾಗುತ್ತಾರೆ.