* ಜೂನ್ ತ್ರೈಮಾಸಿಕದಲ್ಲಿ ಭಾರತದ ವಿದೇಶಿ ನೇರ ಹೂಡಿಕೆ (ಎಫ್ಡಿಐ) ಶೇ.15ರಷ್ಟು ಏರಿಕೆ ಕಂಡು, ₹1.42 ಲಕ್ಷ ಕೋಟಿಯಿಂದ ₹1.63 ಲಕ್ಷ ಕೋಟಿಗೆ ತಲುಪಿದೆ. * ಒಟ್ಟಾರೆ ಹೂಡಿಕೆ ₹2.21 ಲಕ್ಷ ಕೋಟಿ ಆಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಇದು ₹1.98 ಲಕ್ಷ ಕೋಟಿಯಾಗಿತ್ತು.* ರಾಜ್ಯಗಳಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದ್ದು, ₹50,094 ಕೋಟಿ ಹೂಡಿಕೆ ಸ್ವೀಕರಿಸಿದೆ. ನಂತರ ಮಹಾರಾಷ್ಟ್ರ (₹47,188 ಕೋಟಿ), ತಮಿಳುನಾಡು (₹23,505 ಕೋಟಿ), ಹರಿಯಾಣ (₹11,444 ಕೋಟಿ), ಗುಜರಾತ್ (₹10,564 ಕೋಟಿ), ದೆಹಲಿ (₹8,803 ಕೋಟಿ) ಮತ್ತು ತೆಲಂಗಾಣ (₹3,477 ಕೋಟಿ) ಸ್ಥಾನ ಪಡೆದಿವೆ.* ದೇಶವಾರು ಹೂಡಿಕೆಯಲ್ಲಿ ಅಮೆರಿಕ ಅಗ್ರಸ್ಥಾನದಲ್ಲಿದ್ದು, ₹49,379 ಕೋಟಿ ಹೂಡಿಕೆ ಮಾಡಿದೆ. ಇದು ಕಳೆದ ವರ್ಷದ ಹೋಲಿಕೆಯಲ್ಲಿ ಮೂರು ಪಟ್ಟು ಹೆಚ್ಚಾಗಿದೆ. * ಸಿಂಗಪುರ, ಮಾರಿಷಸ್, ಸೈಪ್ರಸ್, ಯುಎಇ, ಕೇಮನ್ ಐಲ್ಯಾಂಡ್, ನೆದರ್ಲೆಂಡ್ಸ್, ಜಪಾನ್ ಮತ್ತು ಜರ್ಮನಿ ಕೂಡ ಪ್ರಮುಖ ಹೂಡಿಕೆ ದೇಶಗಳಾಗಿವೆ.* 2000ರಿಂದ 2025ರವರೆಗೆ ಮಾರಿಷಸ್ (₹16.04 ಲಕ್ಷ ಕೋಟಿ) ಅತಿ ಹೆಚ್ಚು ಹೂಡಿಕೆ ಮಾಡಿದ ದೇಶವಾಗಿದ್ದು, ಸಿಂಗಪುರ (₹15.80 ಲಕ್ಷ ಕೋಟಿ) ಎರಡನೇ ಸ್ಥಾನದಲ್ಲಿದೆ. ಅಮೆರಿಕ ₹6.71 ಲಕ್ಷ ಕೋಟಿ ಹೂಡಿಕೆ ಮಾಡಿ ಮೂರನೇ ಸ್ಥಾನದಲ್ಲಿದೆ.* ಕಂಪ್ಯೂಟರ್ ಯಂತ್ರಾಂಶ ಹಾಗೂ ತಂತ್ರಾಂಶ, ಸೇವೆಗಳು, ವ್ಯಾಪಾರ, ದೂರಸಂಪರ್ಕ, ವಾಹನೋದ್ಯಮ ಮತ್ತು ರಾಸಾಯನಿಕ ವಲಯಗಳಲ್ಲಿ ಹೆಚ್ಚು ಹೂಡಿಕೆ ಆಗಿದೆ.