* ಎವರೆಸ್ಟ್ ಪರ್ವತದ ಹಿಮ ಹೊದಿಕೆ 2024–2025ರ ಚಳಿಗಾಲದಲ್ಲಿ 150 ಮೀಟರ್ ಕುಸಿದಿದ್ದು, ಹಿಮದ ಶೇಖರಣೆ ಕಡಿಮೆಯಾಗಿರುವುದನ್ನು ಸಂಶೋಧನೆ ಕಂಡುಹಿಡಿದಿದೆ.* ಅಮೆರಿಕದ ನಿಕೋಲ್ಸ್ ಕಾಲೇಜಿನ ಹಿಮನದಿ ತಜ್ಞ ಮೌರಿ ಪೆಲ್ಟೊ ಫೆಬ್ರವರಿ 2ರಂದು ತಮ್ಮ ಬ್ಲಾಗ್ನಲ್ಲಿ ಸಂಶೋಧನಾ ವರದಿ ಪ್ರಕಟಿಸಿದ್ದಾರೆ.* 2023ರ ಅಕ್ಟೋಬರ್ನಿಂದ ಈ ವರ್ಷದ ಜನವರಿ ವರೆಗೆ ನಾಸಾ ಕಳುಹಿಸಿರುವ ಚಿತ್ರಗಳನ್ನು ಪೆಲ್ಟೊ ಅವರು ವಿಶ್ಲೇಷಿಸಿದ್ದಾರೆ.* 2024 ಹಾಗೂ 2025ರ ಜನವರಿಯಲ್ಲಿ ‘ಸ್ನೋ ಲೈನ್’ನಲ್ಲಿ ಹಿಮದ ಪ್ರಮಾಣ ಹೆಚ್ಚಾದುದು ಕಂಡುಬಂದಿತ್ತು. ಪರ್ವತದ ಕೆಳಭಾಗದಲ್ಲಿ ಕರಗಿ ಶೇಖರಣೆಯಾಗುವ ಹಿಮವನ್ನು ‘ಸ್ನೋ ಲೈನ್’ ಎನ್ನುತ್ತಾರೆ.* ಇದೇ ವರ್ಷದ ಜನವರಿ 28ರಂದು ಸ್ನೋ ಲೈನ್ 6100 ಮೀಟರ್ನಷ್ಟಿತ್ತು. ಇದು 2024ರ ಡಿಸೆಂಬರ್11ರಂದು ಇದ್ದ ಸ್ನೋ ಲೈನ್ಗಿಂತ 150 ಮೀಟರ್ನಷ್ಟು ಹೆಚ್ಚು ಇತ್ತು.* 2021, 2023, ಮತ್ತು 2024ರ ಚಳಿಗಾಲದಲ್ಲಿ ವಾಡಿಕೆಗಿಂತ ಹೆಚ್ಚು ತಾಪಮಾನ ಹಾಗೂ ಶುಷ್ಕ ವಾತಾವರಣದ ಪರಿಣಾಮವಾಗಿ ಪರ್ವತಗಳ ಹಿಮದ ಹೊದಿಕೆ ತಗ್ಗಿ, ಸ್ನೋ ಲೈನ್ ಹೆಚ್ಚಾಗಿ, ಕಾಳ್ಗಿಚ್ಚು ಹೆಚ್ಚಾಯಿತು. ಎವರೆಸ್ಟ್ ಪರ್ವತದ 6 ಸಾವಿರ ಮೀಟರ್ ಎತ್ತರದಲ್ಲಿ ಹಿಮನದಿಗಳು ಕಾಣದಿರುವುದು ಹಿಮದ ಹೊದಿಕೆಯ ಕ್ಷೀಣತೆಯನ್ನು ಸೂಚಿಸುತ್ತದೆ.* ಹಿಮವು ನೇರವಾಗಿ ಆವಿಯಾಗುವ ಪ್ರಕ್ರಿಯೆಯನ್ನು ಉತ್ಪತನ ಎನ್ನಲಾಗುತ್ತದೆ. ಉತ್ಪತನವು ಹಿಮನದಿಗಳು ಕ್ಷೀಣಿಸಲು ಕಾರಣವಾಗಿದೆ. ಇಷ್ಟೊಂದು ಎತ್ತರದ ಪ್ರದೇಶದಲ್ಲಿ ಚಳಿಗಾಲದ ವೇಳೆ ಹಿಮದ ಹೊದಿಕೆ ಕಡಿಮೆಯಾಗಿರುವುದಕ್ಕೆ ಉತ್ಪತನ ಪ್ರಕ್ರಿಯೆಯೇ ಕಾರಣವಾಗಿರುತ್ತದೆ.