* ಭಾರತವು 2030ರೊಳಗೆ ಪೆಟ್ರೋಲ್ನಲ್ಲಿ 27% ಎಥೆನಾಲ್ ಮಿಶ್ರಣಗುರಿ ಸಾಧಿಸುವ ಉದ್ದೇಶ ಹೊಂದಿದೆ. ಈ ಯೋಜನೆ 2003ರಲ್ಲಿ 5% ಎಥೆನಾಲ್ ಮಿಶ್ರಣದಿಂದ ಆರಂಭವಾಗಿ, ಇಂಧನ ಭದ್ರತೆ ಹಾಗೂ ಪರಿಸರ ಸಂರಕ್ಷಣೆಗೆ ಪೂರಕವಾಗಿ ಬೆಳೆಯುತ್ತ ಬಂದಿದೆ.* ಕಬ್ಬು, ಮೆಕ್ಕೆಜೋಳ, ಧಾನ್ಯಗಳ ಅವಶೇಷ ಹಾಗೂ ತ್ಯಾಜ್ಯಗಳಿಂದ ಎಥೆನಾಲ್ ಉತ್ಪಾದಿಸಿ ಪೆಟ್ರೋಲ್ಗೆ ಮಿಶ್ರಣ ಮಾಡಲಾಗುತ್ತಿದೆ. * ಈ ಯೋಜನೆಯು ಭಾರತವು ಕಚ್ಚಾ ತೈಲದ ಆಮದು ಅವಲಂಬನೆ ಕಡಿಮೆಮಾಡುವುದು, ವಿದೇಶಿ ವಿನಿಮಯವನ್ನು ಉಳಿಸುವುದು, ವಾಹನಗಳಿಂದ ಹೊರಸೂಸುವ ದಟ್ಟ ಹೊಗೆ ಕಡಿಮೆಮಾಡಿ ಪರಿಸರ ಸಂರಕ್ಷಿಸುವುದು, ರೈತರಿಗೆ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವುದು ಹಾಗೂ ತ್ಯಾಜ್ಯದಿಂದ ನವೀಕರಿಸಬಹುದಾದ ಇಂಧನ ಉತ್ಪಾದನೆಯನ್ನು ಉತ್ತೇಜಿಸುವುದನ್ನು ಗುರಿಯಾಗಿಸಿದೆ.\* ಎಥೆನಾಲ್ ಮಿಶ್ರಿತ ಪೆಟ್ರೋಲ್ ದೇಶದ ಇಂಧನ ಭದ್ರತೆಯನ್ನು ಬಲಪಡಿಸುತ್ತದೆ, ತೈಲ ಆಮದು ಕಡಿಮೆಯಾಗಿ ಆರ್ಥಿಕತೆಗೆ ಲಾಭವಾಗುತ್ತದೆ. ಪರಿಸರದ ದೃಷ್ಟಿಯಿಂದ ಇದು ಕಾರ್ಬನ್ ಉತ್ಸವವನ್ನು ತಗ್ಗಿಸಿ, ಭಾರತದ 2070ರ ಶೂನ್ಯ ಇಂಗಾಲ ಹೊರಸೂಸುವಿಕೆ ಗುರಿಗೆ ಸಹಕಾರಿಯಾಗುತ್ತದೆ.* ರೈತರಿಗೆ ಕಬ್ಬು, ಮೆಕ್ಕೆಜೋಳ ಮುಂತಾದ ಬೆಳೆಗಳಿಗೆ ಸ್ಥಿರ ಬೇಡಿಕೆ ಸೃಷ್ಟಿಸಿ ಆದಾಯ ಹೆಚ್ಚಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳು ಮತ್ತು ಕೈಗಾರಿಕಾ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.* ಆದರೆ ಯೋಜನೆಗೆ ಅಡಚಣೆಗಳೂ ಇವೆ. ಹೆಚ್ಚಿದ ಎಥೆನಾಲ್ ಬೇಡಿಕೆ ಆಹಾರ ಭದ್ರತೆಯ ಅಪಾಯವನ್ನುಂಟುಮಾಡಿ ಮೆಕ್ಕೆಜೋಳದ ಬೆಲೆ ಏರಿಕೆಗೆ ಕಾರಣವಾಗಿದೆ. ಇದರಿಂದ ಕೋಳಿ ಉದ್ಯಮಕ್ಕೂ ಹೊಡೆತ ಬಿದ್ದಿದೆ. * ಕಬ್ಬಿನ ಎಥೆನಾಲ್ ಉತ್ಪಾದನೆಗೆ ಹೆಚ್ಚಿನ ನೀರು ಬೇಕಾಗುವುದರಿಂದ ಉತ್ತರ ಪ್ರದೇಶ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಅಂತರ್ಜಲ ಕುಂಠಿತಗೊಳ್ಳುವ ಅಪಾಯವಿದೆ.* ತಾಂತ್ರಿಕವಾಗಿ ಎಂಜಿನ್ಗಳು ಹೆಚ್ಚಿನ ಮಿಶ್ರಣಕ್ಕೆ ಹೊಂದಿಕೊಳ್ಳದಿರುವುದು, ಪ್ಲೆಕ್ಸ್ ಇಂಧನ ವಾಹನಗಳ ದುಬಾರಿ ಬೆಲೆ, ಬ್ಯಾಂಕುಗಳಿಂದ ಹಣಕಾಸು ಕೊರತೆ ಹಾಗೂ ರಾಷ್ಟ್ರವ್ಯಾಪಿ ಶೇಖರಣಾ ಮತ್ತು ವಿತರಣಾ ಮೂಲಸೌಕರ್ಯದ ಅಭಾವ ಯೋಜನೆಯ ಯಶಸ್ಸಿಗೆ ಸವಾಲುಗಳಾಗಿವೆ.