* 2024–25ರ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಸೋಮವಾರ ಕೇಂದ್ರ ಸರ್ಕಾರಕ್ಕೆ ₹8,076 ಕೋಟಿ ಲಾಭಾಂಶ ಪಾವತಿಸಿದೆ. 2023–24ರ ಇದೇ ಅವಧಿಯಲ್ಲಿ ಬ್ಯಾಂಕ್ ₹6,959 ಕೋಟಿ ಲಾಭಾಂಶ ಪಾವತಿಸಿತ್ತು.* ಎಸ್ಬಿಐ ಅಧ್ಯಕ್ಷ ಸಿ.ಎಸ್. ಸೆಟ್ಟಿ ಅವರು ಲಾಭಾಂಶದ ಚೆಕ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ನೀಡಿದರು ಎಂದು ಹಣಕಾಸು ಸಚಿವಾಲಯವು ‘ಎಕ್ಸ್’ ಪ್ಲಾಟ್ಫಾರ್ಮ್ನಲ್ಲಿ ತಿಳಿಸಿದೆ.* ಹಿಂದಿನ ಆರ್ಥಿಕ ವರ್ಷದಲ್ಲಿ ಪ್ರತಿಯೊಂದು ಈಕ್ವಿಟಿ ಷೇರಿಗೆ ₹15.90 ಲಾಭಾಂಶ ಘೋಷಿಸಲಾಗಿತ್ತು, ಆದರೆ 2023–24ರ ಇದೇ ಅವಧಿಯಲ್ಲಿ ಈ ಪ್ರಮಾಣ ₹13.70 ಆಗಿತ್ತು.* 2024–25ರ ಆರ್ಥಿಕ ವರ್ಷದಲ್ಲಿ ಬ್ಯಾಂಕ್ನ ನಿವ್ವಳ ಲಾಭ ಶೇ.16ರಷ್ಟು ಏರಿಕೆಯಾಗಿದ್ದು, ₹70,901 ಕೋಟಿಯಷ್ಟು ದಾಖಲೆ ಲಾಭ ಗಳಿಸಿದೆ.