* ಹಣಕಾಸು ಸೇವೆಗಳ ಸಂಸ್ಥೆಗಳ ಬ್ಯೂರೋ (FSIB) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ (MD) ಹುದ್ದೆಗೆ ಶ್ರೀ ರವಿ ರಂಜನ್ ಅವರನ್ನು ಶಿಫಾರಸು ಮಾಡಿದೆ. ಈ ಹುದ್ದೆಗೆ ಸೆಪ್ಟೆಂಬರ್ 9 ಮತ್ತು 11 ರಂದು ಸಂದರ್ಶನಗಳು ನಡೆದವು.* ರಂಜನ್ ಅವರು 1991ರಲ್ಲಿ SBIಯಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದರು.* ಬ್ಯೂರೋ, ಅವರ ಕಾರ್ಯಕ್ಷಮತೆ, ಅನುಭವ ಮತ್ತು ಅಸ್ತಿತ್ವದಲ್ಲಿರುವ ನಿಯತಾಂಕಗಳನ್ನು ಪರಿಗಣಿಸಿ, ರವಿ ರಂಜನ್ ಅವರನ್ನು SBIಯ MD ಹುದ್ದೆಗೆ ಶಿಫಾರಸು ಮಾಡಿದೆ.* ಅವರಿಗೆ ಭಾರತ ಹಾಗೂ ವಿದೇಶಗಳಲ್ಲಿ ಒಟ್ಟಾರೆ 33 ವರ್ಷಗಳ ಬ್ಯಾಂಕಿಂಗ್ ಅನುಭವವಿದೆ.* ಅವರು ಗುರುಗ್ರಾಮದ ಎಂಡಿಐನಿಂದ ವ್ಯವಹಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಾಟ್ನಾ ವಿಶ್ವವಿದ್ಯಾಲಯದಿಂದ ಸಸ್ಯಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿ ಪಡೆದಿದ್ದಾರೆ.* ಅವರು ಭಾರತ ಮತ್ತು ವಿದೇಶಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ.