* ಚೀನಾದ ಶಾಂಫ್ಟ ಶಾಂಗ್ರ್ ರಕ್ಷಣಾ ಸಚಿವರ ಗೋಷ್ಠಿಯಲ್ಲಿ ಗಡಿಯಾಚೆಗಿನ ಭಯೋತ್ಪಾದನೆ ಕುರಿತು ಸ್ಪಷ್ಟವಾದ ಉಲ್ಲೇಖ ಇಲ್ಲದ ಕಾರಣ ಎಸ್ಸಿಒ ಜಂಟಿ ಹೇಳಿಕೆ ದಾಖಲೆಗೆ ಸಹಿ ಹಾಕಲು ಭಾರತ ನಿರಾಕರಿಸಿದೆ.* ಗುರುವಾರ ಚೀನಾದ ಚಿಂಗ್ಲವ್ನಲ್ಲಿ ನಡೆದ ಸಭೆಯಲ್ಲಿ ಭಾರತವನ್ನು ಪ್ರತಿನಿಧಿ ಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನ ಪೋಷಿತ ಉಗ್ರವಾದದ ಕುರಿತು ಹೇಳಿಕೆಯಲ್ಲಿ ನಿಖರವಾಗಿ ತಿಳಿಸದ ಕಾರಣ ಜಂಟಿ ಹೇಳಿಕೆಗೆ ಸಹಿ ಮಾಡಲು ನಿರಾಕರಿಸಿದರು. * ಭಾರತದ ರಕ್ಷಣಾ ಸಚಿವರು ಜಂಟಿ ಹೇಳಿಕೆಯ ದಾಖಲೆಯನ್ನು ಅನುಮೋದಿಸಲು ನಿರಾಕರಿಸಿರುವ ಕಾರಣ. ಈ ಬಾರಿಯ ಸಭೆಯು ಯಾವುದೇ ಅಧಿ ಕೃತ ಪ್ರಕಟಣೆಯಿಲ್ಲದೆ ಕೊನೆಗೊಂಡಿದೆ.ಗಡಿ ಪ್ರದೇಶಗಳು ಮತ್ತು ಅದರಾಚೆಗಿನ ಉಗ್ರವಾದ ಸೇರಿದಂತೆ ಭಯೋತ್ಪಾದನೆ ವಿರುದ್ದ ಸಭೆಯಲ್ಲಿ ಸ್ಪಷ್ಟ ಯೋಜನೆಗಳು ಜಾರಿಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ. * ಸಿಂಗ್ ಅವರು, ''ಕೆಲವು ರಾಷ್ಟ್ರಗಳು ಭಯೋತ್ಪಾದನೆಯನ್ನೇ ತಮ್ಮ ದೇಶದ ಧೋರಣೆ ಎಂಬಂತೆ ಬಿಂಬಿಸುತ್ತಿವೆ. ಅಂಥ ರಾಷ್ಟ್ರಗಳನ್ನು ಪೋಷಿಸುವ ಮೂಲಕ ಭಯೋತ್ಪಾದನೆಗೆ ಬೆಂಬಲ ನೀಡುವ ಕೆಲಸ ಮಾಡಲಾಗುತ್ತಿದೆ. ಭಾರತ ಈಗಾಗಲೇ ಆಪರೇಷನ್ ಸಿಂದೂರ ಮೂಲಕ ಉಗ್ರವಾದಿಗಳಿಗೆ ತಕ್ಕ ಉತ್ತರ ನೀಡಿದೆ. * ಭಯೋತ್ಪಾದನೆ ಪೋಷಿತ ರಾಷ್ಟ್ರಗಳು ಎಂದಿಗೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ'' ಎಂದು ಅವರು ಹೇಳಿದರು. ಮಾತ್ರವಲ್ಲ, "ಉಗ್ರವಾದ ವನ್ನು ಎದುರಿಸಲು ಏಕರೀತಿಯ ಮಾನದಂಡ ಗಳನ್ನು ಅನುಸರಿಸಬೇಕು. ಎಸ್ಸಿಒ ಸದಸ್ಯ ದೇಶಗಳು ಒಗ್ಗಟ್ಟಿನಿಂದ ಉಗ್ರವಾದವನ್ನು ಖಂಡಿಸಬೇಕು ಮತ್ತು ಉಗ್ರರ ವಿರುದ್ಧ ಹೋರಾಡುವ ಕೆಲಸ ಮಾಡಬೇಕು'' ಎಂದು ಕರೆ ನೀಡಿದರು. * ಎಸ್ಸಿಒ ಸಭೆಯಲ್ಲಿ ಭಾರತ, ಚೀನಾ ದೇಶಗಳ ಜತೆಗೆ ಪಾಕಿಸ್ತಾನ, ಇರಾನ್, ಕಜಕಿಸ್ತಾನ, ಕಿರ್ಗಿಸ್ತಾನ, ರಷ್ಯಾ, ತಜಕಿಸ್ತಾನ ಮತ್ತು ಉಲ್ಲೇಕಿಸ್ತಾನದ ಪ್ರತಿನಿಧಿ ಗಳು ಭಾಗವಹಿಸಿದ್ದರು.