* ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಉದ್ಯಮಿ ಎಸ್. ರಘುನಾಥ್ ಆಯ್ಕೆಯಾಗಿದ್ದಾರೆ.* ಶ್ರೀರಂಗಪಟ್ಟಣದ ವೈದಿಕ ಪಂಡಿತ ಭಾನುಪ್ರಕಾಶ್ ಶರ್ಮ ಅವರನ್ನು ಎಸ್. ರಘುನಾಥ್ ಅವರು 2,611 ಮತಗಳ ಸ್ಪಷ್ಟ ಅಂತರದಿಂದ ಸೋಲಿಸಿದ್ದಾರೆ.* ರಾಜ್ಯದಲ್ಲಿ ಒಟ್ಟು 66 ಸಾವಿರ ಮತದಾರರಿದ್ದು, ಬೆಂಗಳೂರು ನಗರ ಪ್ರದೇಶದಲ್ಲೇ 34 ಸಾವಿರ ಮಂದಿ ಇದ್ದರು. ಇವರಲ್ಲಿ 24,574 ಜನರು ಮತ ಚಲಾಯಿಸಿದರು. ಈ ಚುನಾವಣೆಯಲ್ಲಿ ಶರ್ಮ ಅವರಿಗೆ 11,235 ಮತಗಳು ಸಿಕ್ಕರೆ, ರಘುನಾಥ್ ಅವರಿಗೆ 13,339 ಮತಗಳ ಬೆಂಬಲ ದೊರಕಿತು.* ಹಿಂದಿನ ಚುನಾವಣೆಯಲ್ಲಿ ರಘುನಾಥ್ ಅವರು ಅಶೋಕ ಹಾರನಹಳ್ಳಿ ವಿರುದ್ಧ ಕೇವಲ 447 ಮತಗಳ ಅಂತರದಿಂದ ಸೋತಿದ್ದರು.* ಈ ವರ್ಷದಿಂದಲೇ ರಾಜ್ಯದ ಪ್ರತಿಯೊಂದು ಜಿಲ್ಲೆಗೂ ಒಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡುವ ಉದ್ದೇಶದಿಂದ ಚುನಾವಣೆ ನಡೆಸಲಾಯಿತು. 1000ಕ್ಕೂ ಹೆಚ್ಚು ಮತದಾರರಿರುವ 21 ಜಿಲ್ಲೆಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಯಿತು.* ಬೆಂಗಳೂರು ನಗರದಲ್ಲಿ ರಾಯರಾಯ ಕಲ್ಯಾಣ ಮಂಟಪ, ಚಂದ್ರಶೇಖರಭಾರತಿ ಕಲ್ಯಾಣ ಮಂಟಪ ಮತ್ತು ಎ.ಪಿ.ಎಸ್. ಕಾಲೇಜಿನಲ್ಲಿ ಮತದಾನ ಕೇಂದ್ರಗಳನ್ನು ತೆರೆಯಲಾಗಿತ್ತು. ಭಾನುವಾರ(ಏಪ್ರಿಲ್ 13) ಬೆಳಿಗ್ಗೆ 8 ರಿಂದ ಸಂಜೆ 4ರ ತನಕ ಮತದಾನ ನಡೆಯಿತು. ನಂತರ ತಕ್ಷಣವೇ ಮತ ಎಣಿಕೆ ಪ್ರಕ್ರಿಯೆ ಆರಂಭವಾಯಿತು.